ಶಿರಸಿ: ತಾಲೂಕಿನ ಶ್ರೀ ಕ್ಷೇತ್ರ ಮಂಜಗುಣಿಯ ವೆಂಕಟೇಶ್ವರ ದೇವಾಲಯದಲ್ಲಿ ರಾಷ್ಟ್ರೀಯ ಗಾಯನ ಖ್ಯಾತಿಯ ಪಂ. ಜಯತೀರ್ಥ ಮೆವುಂಡಿ ಹಾಗೂ ಅವರ ವಿದ್ಯಾರ್ಥಿಗಳಿಂದ ಸಂಗೀತ ಸೇವೆ ಕಾರ್ಯಕ್ರಮ ನಡೆಯಲಿದೆ.
ಅಂದು ಮುಂಜಾನೆ 6 ಘಂಟೆಯಿಂದ ಆರಂಭಗೊಳ್ಳುವ ಕಾರ್ಯಕ್ರಮದಲ್ಲಿ ಗಾಯಕಿ ವಾಣಿ ಹರ್ಡಿಕರ್, ಪ್ರಕಾಶ ಹೆಗಡೆ ಕಲ್ಲಾರೆಮನೆ, ವಿಭಾ ಹಗಡೆ, ವಿನಾಯಕ ಹಿರೇಹದ್ದ, ಭರತ ಹೆಬ್ಬಲಸು ಯಾದಿಯಾಗಿ ಸ್ವರತೀರ್ಥರ ಅನೇಕ ವಿದ್ಯಾರ್ಥಿಗಳ ಸಂಗೀತ ಸೇವೆ ನಡೆಯಲಿದೆ.
ಕಳೆದ ಅನೇಕ ವರ್ಷಗಳಿಂದ ಪಂ. ಮೆವುಂಡಿಯವರು ಈ ಸಂಗೀತ ಸೇವೆ ನಡೆಸಿಕೊಂಡು ಬರುತ್ತಿರುವುದು ಉಲ್ಲೇಖನೀಯವಾಗಿದ್ದು ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ವಿನಂತಿಸಿಕೊಂಡಿದ್ದಾರೆ.