• first
    second
    third
    previous arrow
    next arrow
  • ಟೇಬಲ್ ಟೆನ್ನಿಸ್ ಪಂದ್ಯಾವಳಿ; ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯ ವಿದ್ಯಾರ್ಥಿಗಳು ತೃತೀಯ

    300x250 AD

    ಹಳಿಯಾಳ: ಬೆಳಗಾವಿಯ ಜೈನ್ ಇಂಜನಿಯರಿಂಗ್ ಕಾಲೇಜಿನಲ್ಲಿ ನಡೆಸಿದ ಬೆಳಗಾವಿ ವಿಭಾಗದ ಪುರುಷರ ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಕರ್ನಾಟಕ ಲಾ ಸೊಸೈಟಿಯ ವಿಶ್ವನಾಥರಾವ್ ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದಿದ್ದಾರೆ.

    ಈ ಪಂದ್ಯಾವಳಿಯಲ್ಲಿ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ಅಖಿಲ್‍ಕಟ್ಟಿ, ಸಂದೀಪ ಎಸ್ ದೊಡ್ಡಮನಿ, ಸೌರಭ್ ಸಬ್ನಿಸ್ ಮತ್ತು ಇ ಎಂಡ್ ಸಿ ವಿಭಾಗದ ಆದಿತ್ಯ ನಾಯ್ಕ ಅವರನ್ನು ಒಳಗೊಂಡ ಟೇಬಲ್ ಟೆನ್ನಿಸ್‍ತಂಡ ಬೆಳಗಾವಿಯ ಕೆ.ಎಲ್.ಇಇಂಜನಿಯರಿಂಗ್ ಕಾಲೇಜು ತಂಡವನ್ನು ಮಣಿಸಿ ತೃತೀಯ ಸ್ಥಾನ ಪಡೆಯಿತು.

    ವಿದ್ಯಾರ್ಥಿಗಳ ಈ ಸಾಧನೆಗೆ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷರಾಜೇಂದ್ರ ಬೆಳಗಾಂವಕರ್, ಪ್ರಾಂಶುಪಾಲ ಡಾ. ವಿ ಎ ಕುಲಕರ್ಣಿ, ದೈಹಿಕ ಶಿಕ್ಷಣ ನಿರ್ದೇಶಕ ಗದಿಗೆಪ್ಪಾ ಯಳ್ಳೂರ್ ಮತ್ತುಎಲ್ಲ ಸಿಬ್ಬಂದಿ ವರ್ಗದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    300x250 AD

    Share This
    300x250 AD
    300x250 AD
    300x250 AD
    Back to top