• Slide
    Slide
    Slide
    previous arrow
    next arrow
  • ಹಾಳಾದ ರಸ್ತೆ ದುರಸ್ತಿ ಮಾಡಿ; ಡಿ.1ಕ್ಕೆ ರಸ್ತೆ ತಡೆದು ಪ್ರತಿಭಟನೆ ಎಚ್ಚರಿಕೆ

    300x250 AD


    ಕಾರವಾರ: ನಗರದ ಬಿಲ್ಟ್ ಸರ್ಕಲ್ ನಿಂದ ಬೈತಕೋಲ್ ವರೆಗೆ ಹಾಗೂ ಹಬ್ಬುವಾಡದಿಂದ ಶಿರವಾಡ ರೈಲ್ವೆ ಸ್ಟೇಷನ್ ತನಕ ಹಾಳಾಗಿರುವ ರಸ್ತೆಯನ್ನು ದುರಸ್ತಿಪಡಿಸುವ ಕುರಿತು ಜಯಕರ್ನಾಟಕ ಜನಪರ ವೇದಿಕೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಅಧಿಕಾರಿಗಳಿಂದ ಸೂಕ್ತ ಸ್ಪಂದನೆ ದೊರೆಯದೆ ಸಮಸ್ಯೆ ಇತ್ಯರ್ಥವಾಗದ ಕಾರಣ ಜಯಕರ್ನಾಟಕ ಜನಪರ ವೇದಿಕೆಯಿಂದ ಜಿಲ್ಲಾ ಆಟೋ ಚಾಲಕ ಮಾಲಕರ ಸಂಘ ಮತ್ತು ನಾಗರಿಕರ ಸಹಯೋಗದೊಂದಿಗೆ ಡಿ.1 ರಂದು ಪಟ್ಟಣದ ಪ್ರಮುಖ ಬಂದರು ಎದುರಿನ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

    ಕಾರವಾರ ಬಿಲ್ಟ್ ಸರ್ಕಲ್ ನಿಂದ ಬೈತಕೋಲವರೆಗೆ ಹಾಗೂ ಹಬ್ಬುವಾಡದಿಂದ ಶಿರವಾಡ ರೈಲ್ವೆ ಸ್ಟೇಷನ್ ತನಕರಸ್ತೆ ಸಂಪೂರ್ಣವಾಗಿ ಹದಗೆಟ್ಟಿರುವುದರಿಂದ ಆಟೋ ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ಸಂಚರಿಸಲು ತೊಂದರೆಯಾಗುತ್ತಿದೆ. ರಸ್ತೆ ಹಾಳಾಗಿರುವುದರಿಂದ ಬಹಳ ಸಲ ಅಪಘಾತ ಸಂಭವಿಸಿದೆ. ಈ ರಸ್ತೆಯಲ್ಲಿ ಕೇವಲ ಪ್ಯಾಚ್ವರ್ಕ್ ಮಾಡಿದ್ದು, ಅದು ಕೂಡ ಅಸಮರ್ಪಕವಾಗಿದೆ. ಸಮರ್ಪಕವಾಗಿ ರಸ್ತೆಕಾಮಗಾರಿ ಕೈಗೊಂಡು ಗುಣಮಟ್ಟದ ರಸ್ತೆ ನಿರ್ಮಿಸಲು ಕ್ರಮ ಕೈಗೊಳ್ಳಬೇಕಿದೆ. ಹಬ್ಬುವಾಡ ರಸ್ತೆಯನ್ನು ಕಳೆದ ವರ್ಷದ ಹಿಂದೆ ಸರಿಪಡಿಸಿದ್ದು ಕಳಪೆ ಮಟ್ಟದ್ದಾಗಿದೆ.


    ಈ ಎರಡು ರಸ್ತೆಯು ಕಾರವಾರ ನಗರ ಪ್ರವೇಶಿಸುವ ಪ್ರಮುಖ ರಸ್ತೆಗಳಾಗಿದ್ದು ಕಾರವಾರದ ಸೌಂದರ್ಯವನ್ನು ಹೆಚ್ಚಿಸುವ ಮತ್ತು ಪ್ರವಾಸಿಗರು ಹಾದುಹೋಗಿರುವ ಮುಖ್ಯರಸ್ತೆಯಾಗಿದೆ. ರಸ್ತೆ ಅಸಮರ್ಪಕವಾಗಿರುವುದರಿಂದ ಕಾರವಾರಕ್ಕೆ ಬರುವ ಪ್ರವಾಸಿಗರು ಮತ್ತು ಸಾರ್ವಜನಿಕರು ಆಟೋಚಾಲಕರು ಜಿಲ್ಲಾಡಳಿತಕ್ಕೆ ಹಿಡಿಶಾಪ ಹಾಕುವಂತಾಗಿದೆ ಆದ್ದರಿಂದ ಶೀಘ್ರದಲ್ಲಿಯೇ ಎರಡು ರಸ್ತೆಯನ್ನು ಉತ್ತಮ ಗುಣಮಟ್ಟದ ( ನೈಸ್)ರಸ್ತೆಯಾಗಿ ಮಾರ್ಪಡಿಸಬೇಕೆಂದು ವೇದಿಕೆಯಿಂದ ಅಕ್ಟೋಬರ್ 22ರಂದು ಮನವಿ ಸಲ್ಲಿಸಲಾಗಿತ್ತು.

    300x250 AD

    ಜಿಲ್ಲಾಡಳಿತದ ನಿರ್ಲಕ್ಷ್ಯ ಧೋರಣೆಯಿಂದಾಗಿ ಪ್ರತಿಭಟನೆ ಅನಿವಾರ್ಯವಾಗಿದ್ದು, ಇದೇ ನವೆಂಬರ್ 30ರ ಒಳಗೆ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳದೇ ಇದ್ದಲ್ಲಿ ಡಿಸೆಂಬರ್ 1 ರಂದು ಮುಂಜಾನೆ 11 ಗಂಟೆಗೆ ಪಟ್ಟಣದ ಬಂದರ್ ರಸ್ತೆಯನ್ನು ತಡೆದುಉಗ್ರವಾಗಿ ಪ್ರತಿಭಟಿಸಲಾಗುವುದು ಎಂದು ಜಿಲ್ಲಾಧ್ಯಕ್ಷ ದಿಲೀಪ್‍ಅರ್ಗೇಕರ ತಿಳಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top