• Slide
    Slide
    Slide
    previous arrow
    next arrow
  • ಸಿದ್ದಾಪುರದಲ್ಲಿ ಭೀಮಣ್ಣ ನಾಯ್ಕ ಪ್ರಚಾರ ಸಭೆ; ಗ್ರಾಮೀಣ ಭಾಗಕ್ಕೆ ಶಕ್ತಿ ತುಂಬುವ ವಿಶ್ವಾಸ

    300x250 AD

    ಸಿದ್ದಾಪುರ: ಪಕ್ಷದ ನಾಯಕರ ಸೂಚನೆಗೆ ಮೇರೆಗೆ ನಾನು ಈ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿದ್ದೇನೆ. ಜಿಪಂ ಸದಸ್ಯನಾಗಿ ಕೆಲಸ ಮಾಡಿರುವ ಅನುಭವದ ಜೊತೆಗೆ ಗ್ರಾಮೀಣ ಭಾಗದಲ್ಲಿ ಪಂಚಾಯತಕ್ಕೆ ಹೆಚ್ವಿನ ಶಕ್ತಿ ನೀಡುವುದು, ಹಾಗು ನೂನ್ಯತೆಯನ್ನು ಸರಿಪಡಿಸುವುದು ಪರಿಷತ್ ಸದಸ್ಯನಾಗಿ ಪ್ರಯತ್ನ ಮಾಡುತ್ತೇನೆ ಎಂದು ಪರಿಷತ್ ಚುನಾವಣಾ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಹೇಳಿದರು.

    ಅವರು ಶುಕ್ರವಾರ ಪಟ್ಟಣದ ಬ್ಲಾಕ್ ಕಾಂಘರೆಸ್ ಕಛೇರಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಭಾಗಿಯಾಗಿ, ಕೇಂದ್ರ ಹಾಗು ರಾಜ್ಯ ಸರಕಾರಗಳು ಕಾಂಗ್ರೆಸ್ ಸರಕಾರದ ಕಾರಗಯವನ್ನು ಹೆಸರು ಬದಲಿಸಿ, ತಮ್ಮ ಯೋಜನೆಗಳೆಂದು ಬಿಂಬಿಸಿವೆ. ಈ ಚುನಾವಣೆಯಲ್ಲಿ ಜಿಪಂ ಮತ್ತು ತಾಪಂ ಸದಸ್ಯರು ಮತದಾನ ವಂಚಿತರಾಗಿ ಇರುವುದಕ್ಕೆ ಇಂದಿನ ಸರಕಾರ ಕಾರಣವಾಗಿದೆ. ಈಗ ಜಿಪಂ&ತಾಪಂ ಚುನಾವಣೆ ನಡೆದಿದ್ದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದರಲ್ಲಿ ಸಂಶಯವಿಲ್ಲ ಎಂದರು.

    ಕೇಂದ್ರ, ರಾಜ್ಯ ಸರಕಾರ ಗ್ರಾಮೀಣ ಭಾಗಕ್ಕೆ ಆರ್ಥಿಕ ಅಭಿವೃದ್ಧಿ ಮೂಲಕ ಶಕ್ತಿ ನೀಡುತ್ತಿಲ್ಲ. ಪ್ರಸ್ತುತ ಪಂ. ಸದಸ್ಯರು, ಅಧ್ಯಕ್ಷರು ಕೇವಲ ನಾಮಕಾವಸ್ಥೆ ಆಗಿದ್ದಾರೆ. ರಾಜ್ಯದಲ್ಲಿ ಪಂಚಾಯತ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ. ಅದಕ್ಕೆ ರಾಜ್ಯ ಸರಕಾರ ನೇರ ಹೊಣೆ.  ಪಂಚಾಯತಕ್ಕೆ, ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಶಕ್ತಿ ನೀಡುವ ಕಾರಣಕ್ಕೆ ತನಗೆ ಮತ ನೀಡುವಂತೆ ಅವರು ಮತ ಯಾಚಿಸಿದರು.

    ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಒಐಅ ಗೆ ಧಮ್ಮಿಲ್ಲ ಎಂಬ ಘೋಟ್ನೆಕರ್ ಈ ಹಿಂದಿನ ಹೇಳಿಕೆಗೆ ಪ್ರತಿಕ್ರಿಯಿಸಿ, ಈ ಹಿಂದಿನ ಶಾಸಕರಾಗಿದ್ದ ಘೋಟ್ನೇಕರ್ ಅವರು ಯಾವ ಉದ್ದೇಶಕ್ಕೆ ಹೇಳಿದ್ದಾರೆ ತಿಳಿದಿಲ್ಲ. ಆದರೆ ನಾನು ಎಲ್ಲರನ್ನೂ ಒಗ್ಗೂಡಿಸಿಕೊಂಡು, ಅಭಿವೃದ್ಧಿ ರಾಜಕಾರಣ ಮಾಡಿ ಹೋಗುವುದಾಗಿ ಹೇಳಿದರು.

    300x250 AD

    ಪಕ್ಷದ ಶಿಸ್ತಿನ ಸಿಪಾಯಿಯಾಗಿ ನಾನು ಕಾರ್ಯನಿರ್ವಹಿಸುತ್ತಿದ್ದೇನೆ. ಆ ನಿಟ್ಟಿನಲ್ಲಿ ಪಕ್ಷದ ನಾಯಕರ ಸೂಚನೆಯ ಮೇರೆಗೆ ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದರು. ಪಕ್ಷದಲ್ಲಿ ಯಾವುದೇ ಒಡಕಿಲ್ಲ, ಬಣರಾಜಕೀಯವಿಲ್ಲ ಎಂದರು.

    ರಾಜಕಾರಣ ಎನ್ನುವುದು ಸ್ವಾರ್ಥಕ್ಕೆ ಬಳಸುವಂತ ವಸ್ತುವಲ್ಲ. ಸೋತಾಗಲೂ ಜನರೆಡೆಗೆ ಇದ್ದಾಗ ಮಾತ್ರ ಗೆಲುವು ದೊರಕಲು ಸಾಧ್ಯ ಎಂದರು.

    ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ, ಧುರೀಣರಾದ ವಿ. ಎನ್ ನಾಯ್ಕ, ಗಂಗಾಧರ ಮಡಿವಾಳ,ಅಬ್ದುಲ್ಲಾ ಹೇರೂರು, ಸೀಮಾ ಹೆಗಡೆ, ಕೆ.ಜಿ.ನಾಗರಾಜ, ಆರ್ ಎಮ್ ಹೆಗಡೆ ಬಾಳೇಸರ, ಶ್ರೀಪಾದ ಹೆಗಡೆ ಕಡವೆ, ವಿವೇಕ ಹೆಗಡೆ ಗಡಿಹಿತ್ಲು ಸೇರಿದಂತೆ ಇನ್ನಿತರರು ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top