ಕಾರವಾರ: ತಾಲೂಕಾ ಪಂಚಾಯತ್‍ನ ಸಹಾಯಕ ನಿರ್ದೇಶಕಿ ರೂಪಾಲಿ ಬಡಕುಂದ್ರಿ ನೇತೃತ್ವದಲ್ಲಿ ಹಣಕೋಣಗ್ರಾಮ ಪಂಚಾಯತ ವ್ಯಾಪ್ತಿಯ ಭೀಮಕೋಲ್‍ನಲ್ಲಿ ರೋಜಗಾರ ದಿವಸ್ ಆಚರಿಸಲಾಯಿತು.
15 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸುತ್ತಿರುವ ಭೀಮಕೋಲ್ ಕೆರೆ ಕಾಮಗಾರಿ ಸ್ಥಳದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ 15ಕ್ಕೂ ಅಧಿಕಕೂಲಿಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಮಹಾತ್ಮಗಾಂಧಿರಾಷ್ಟ್ರೀಯಗ್ರಾಮೀಣಉದ್ಯೋಗಖಾತ್ರಿಯೋಜನೆಅಡಿಯಲ್ಲಿ ಪೌಷ್ಟಿಕ ಕೈತೋಟ, ಎರೆಹುಳು ಗೊಬ್ಬರತೊಟ್ಟಿ, ಬಾವಿ, ಕೆರೆ, ಕೃಷಿ ಹೊಂಡ, ಶೌಚಾಲಯ, ಕಾಲುವೆ ನಿರ್ಮಾಣ, ಅರಣ್ಯಟ್ರಂಚ್, ಅರಣ್ಯೀಕರಣ, ಆಟದ ಮೈದಾನ, ಅಂಗನವಾಡಿ, ಶಾಲಾ ಕಾಂಪೌಂಡ್, ಹಳ್ಳ ಹೋಳೆತ್ತುವುದು ಸೇರಿದಂತೆ 260ಕ್ಕೂ ಅಧಿಕ ಕಾಮಗಾರಿಗಳನ್ನು ವೈಯಕ್ತಿಕ ಹಾಗೂ ಸಮುದಾಯ ವಿಭಾಗದಲ್ಲಿ ಕೈಗೊಳ್ಳಲು ಅವಕಾಶವಿದೆ ಎಂದರು.
ಈವರೆಗೆ ನರೇಗಾದಡಿ ಲಭ್ಯವಿದ್ದ ಕೂಲಿ ದಿನಗಳ ಸಂಖ್ಯೆಯನ್ನು ನೆರೆ ಹಾವಳಿಗೆ ಒಳಗಾದ ಪ್ರದೇಶದಲ್ಲಿ 150 ದಿನಗಳಿಗೆ ಹೆಚ್ಚಿಸಿದ್ದು, ಕೂಲಿ ಹಾಗೂ ಕಾಮಗಾರಿಗಳ ಬಗ್ಗೆ ಪ್ರತಿಯೊಬ್ಬರು ಗ್ರಾಮ ಪಂಚಾಯತ್‍ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬೇಕು. ಅಲ್ಲದೇ ಕೂಲಿ ಕೆಲಸದ ಅಗತ್ಯತೆ ಇರುವವರು ಗ್ರಾಮ ಪಂಚಾಯತ್‍ಗೆ ಬೇಡಿಕೆ ಸಲ್ಲಿಸಬಹುದು. ಗ್ರಾಮಸ್ಥರ ಕೂಲಿ ಕೆಲಸದ ಬೇಡಿಕೆಗೆ ಅನುಸಾರವಾಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಲಭ್ಯವಿರುವ ಕಾಮಗಾರಿಯಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕೂಲಿ ಕೆಲಸ ನೀಡಲಿದ್ದಾರೆ ಎಂದು ತಿಳಿಸಿದರು.
ತಾಲೂಕಾ ಐಇಸಿ ಸಂಯೋಜಕ ಫಕ್ಕೀರಪ್ಪತುಮ್ಮಣ್ಣನವರ ಮಾತನಾಡಿ, ಉದ್ಯೋಗಖಾತ್ರಿಯೋಜನೆಯಡಿ ಪ್ರತಿಯೊಂದುಕುಟುಂಬಕ್ಕೂ ಕೂಲಿ ಕೆಲಸ ನೀಡಲಾಗುತ್ತಿದ್ದು, ಜನರು ಕೂಲಿ ಕೆಲಸಕ್ಕಾಗಿ ನಗರ ಪ್ರದೇಶಗಳಿಗೆ ಗೂಳೆ ಹೋಗದೆತಮ್ಮತಮ್ಮ ಗ್ರಾಮಗಳಲ್ಲಿ ವಾಸವಾಗಿ ಉದ್ಯೋಗಖಾತ್ರಿಯೋಜನೆಯಡಿ ಕೈಗೊಳ್ಳುವ ಕಾಮಗಾರಿಯಲ್ಲಿ ಕೂಲಿ ಕೆಲಸ ಪಡೆದು ಪ್ರತಿ ದಿನಕ್ಕೆ 289 ರೂ. ಕೂಲಿ ಪಡೆಯಬಹುದು. ಈ ಮೂಲಕ ಗ್ರಾಮಕ್ಕೆ ಶಾಶ್ವತ ಆಸ್ತಿ ಸೃಜನೆಯೊಂದಿಗೆತಮ್ಮಗ್ರಾಮದಲ್ಲಿ ನೆಮ್ಮದಿಯಜೀವನ ಸಾಗಿಸಲು ಸಾಧ್ಯವಿದೆ. ಹೀಗಾಗಿ ಪ್ರತಿಯೊಬ್ಬರು ಮಹಾತ್ಮಗಾಂಧಿರಾಷ್ಟ್ರೀಯಗ್ರಾಮೀಣಉದ್ಯೋಗಖಾತ್ರಿಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ಕೂಲಿ ಕೆಲಸಕ್ಕೆ ಬರುತ್ತಿರುವ ಪ್ರತಿಯೊಬ್ಬರುಕಡ್ಡಾಯವಾಗಿಕೋವಿಡ್ ಲಸಿಕೆ ಪಡೆದುಕೊಳ್ಳಬೇಕು ಎಂದರು.
ಪಿಡಿಒ ಬಸಪ್ಪ ಬೇಗನಾಳ, ಡಿಇಒ ಸೀಮಾ ಗೌಡ, ಗ್ರಾಮ ಪಂಚಾಯತಿ ಸಿಬ್ಬಂದಿ ವಿನಿಶಾ ನಾಯ್ಕ, ವೈಶಾಲಿ ಬೇಳೊರ್ಕರ್ ಸೇರಿದಂತೆಗ್ರಾಮಸ್ಥರು, ಕೂಲಿಕಾರರು ಉಪಸ್ಥಿತರಿದ್ದರು.