• Slide
  Slide
  Slide
  previous arrow
  next arrow
 • ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ; ಸಿಬ್ಬಂದಿಗಳಿಗೆ ತರಬೇತಿ ಕಾರ್ಯಾಗಾರ

  300x250 AD


  ಯಲ್ಲಾಪುರ: ದೀನದಯಾಳ ಅಂತ್ಯೋದಯ ಯೋಜನೆಯ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಅಡಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಅಭಿಯಾನ ಘಟಕದ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಾಗಾರವನ್ನು ತಾಲೂಕಿನಲ್ಲಿ ಇತ್ತೀಚಿಗೆ ಆಯೋಜಿಸಲಾಗಿತ್ತು.
  ಮಹಿಳೆಯರ ಜೀವನೋಪಾಯ ಸಂವರ್ಧನೆಗೆ ಅನುಷ್ಠಾನಗೊಳಿಸಲಾದ ಉತ್ಪಾದಕ ಗುಂಪುಗಳ ರಚನೆ, ಮೌಲ್ಯವರ್ಧನೆ ಹಾಗೂ ಫಾರ್ವರ್ಡ ಲಿಂಕೇಜ್ ಕುರಿತು ಈ ಕಾರ್ಯಗಾರದಲ್ಲಿ ಹೇಳಿಕೊಡಲಾಯಿತು.


  ಕಾರ್ಯಗಾರದ ಕಲಿಕಾಕ್ಷೇತ್ರ ತಂಡವುನ. 24 ರಂದು ಶಿರಸಿ ತಾಲೂಕಿನ ಯಶಸ್ವಿ ಪ್ರಗತಿಪರರೈತರು, ಮೌಲ್ಯವರ್ಧಿತ ಉತ್ಪನ್ನತಯಾರಕರು, ಕೃಷಿ ಉತ್ಪಾದಕ ಕಂಪನಿ, ಮಹಿಳಾ ಉತ್ಪಾದಕ ಗುಂಪುಗಳಿಗೆ ಭೇಟಿ ನೀಡಿತು. ಕದಂಬ ಮಾರ್ಕೆಟಿಂಗ್ ಸೊಸೈಟಿ ಭೇಟಿ ಸಂದರ್ಭದಲ್ಲಿ ತಾಲೂಕು ಮಟ್ಟದ ಸಂಸ್ಥೆ ಹೇಗೆ ಅಲ್ಲಿನ ಸ್ಥಳೀಯ ಉತ್ಪನ್ನಗಳಿಗೆ ಮಾರುಕಟ್ಟೆಕಲ್ಪಿಸಬಹುದುಎಂಬುದಕ್ಕೆ ನಿದರ್ಶನವಾಗಬಹುದು. ಶಿರಸಿ ತಾಲೂಕಿನ ಕೃಷಿ ಹಾಗೂ ಕಿರುಅರಣ್ಯ ಉತ್ಪನ್ನಗಳನ್ನು ಖರೀದಿಸಿ ಅದನ್ನು ತನ್ನದೇ ಬ್ರಾಂಡ್‍ನಲ್ಲಿ ಮಾರುಕಟ್ಟೆ ನಿರ್ಮಿಸಬಹುದು ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದ್ದನ್ನು ಸಂಸ್ಥೆಯ ಕಾರ್ಯ ಚಟುವಟಿಕೆ ತಾಲೂಕಿನ ಅನೇಕ ಸಣ್ಣರೈತರ ಹಾಗೂ ಕಿರು ಅರಣ್ಯಉತ್ಪಾದಕರಿಗೆ ಆದಾಯ ತರುವಲ್ಲಿ ಯಶಸ್ವಿಯಾಗಿದೆ ಎಂಬುದರ ಕುರಿತು ತಿಳಿದುಕೊಳ್ಳಲಾಯಿತು. ಸಂಸ್ಥೆಯ ವಿಶ್ವೇಶ್ವರ ಭಟ್ಟ ಸ್ಥಳೀಯ ಉತ್ಪನ್ನಗಳಿಗೆ ಅಂತರಾಷ್ಟ್ರೀಯ ಮಾರುಕಟ್ಟೆ ಒದಗಿಸುವುದು ಸೇರಿದಂತೆ ಇತರ ಸಮಗ್ರ ಮಾಹಿತಿಯನ್ನು ಕಲಿಕಾಕ್ಷೇತ್ರ ತಂಡಕ್ಕೆ ನೀಡಿದರು.


  ಅದೇರೀತಿ 3 ಎಕರೆ ಜಮೀನಿನಲ್ಲಿ 65ಕ್ಕೂ ಹೆಚ್ಚಿನ ಬೆಳೆಗಳ ನಿರ್ವಹಣೆ ಮೂಲಕ ಸುಸ್ಥಿರ ಕೃಷಿ ಪದ್ಧತಿಕೈಗೊಂಡ ಬನವಾಸಿಯ ಪ್ರಗತಿಪರ ಕೃಷಿಕ ಹನುಮಂತಪ್ಪ ಮಡ್ಳೂರು ಅವರ ಜಮೀನು, ಪ್ರಗತಿಪರ ಸಾವಯವ ಕೃಷಿಕ ದತ್ತಾತ್ರೇಯ ಹೆಗಡೆ ಮಾವಿನಕೊಪ್ಪ ಹಾಗೂ ಅಂಡಗಿ ಪಂಚಾಯತ ವ್ಯಾಪ್ತಿಯಲ್ಲಿ ಅರಿಶಿಣ ಮತ್ತು ಶುಂಠಿ ಮೌಲ್ಯವರ್ಧಿತ ಉತ್ಪನ್ನಗಳ ಮಹಿಳಾ ಉತ್ಪಾದಕ ಘಟಕಕ್ಕೆ ಕೂಡ ತಂಡ ಭೇಟಿ ನೀಡಿತು.

  300x250 AD


  ಪ್ರಗತಿಮಿತ್ರ ರೈತೋತ್ಪಾದಕ ಕಂಪನಿ ಬಾಳೇಗದ್ದೆಯಿಂದ ಎಫ್‍ಪಿಒರಚನೆ, ಅದರ ಮಹತ್ವದ ಕುರಿತು ಮಾಹಿತಿ ಪಡೆಯಲಾಯಿತು. ಈ ಸಂದರ್ಭದಲ್ಲಿ ರಾಜ್ಯಕಾರ್ಯಕ್ರಮ ವ್ಯವಸ್ಥಾಪಕಿ ಡಾ. ರಾಜೇಶ್ವರಿ, ಜಿಲ್ಲಾ ವ್ಯವಸ್ಥಾಪಕರು, ಶಿರಸಿ ಹಾಗೂ ಯಲ್ಲಾಪುರ ತಾಲೂಕಿನ ಕಾರ್ಯಕ್ರಮ ನಿರ್ವಹಣಾಘಟಕದ ಸಿಬ್ಬಂದಿ ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳ ಅಭಿಯಾನಘಟಕದ ಇಬ್ಬರು ಸಿಬ್ಬಂದಿಗಳು ಭಾಗವಹಿಸಿದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top