ಶಿರಸಿ: ಕದಂಬ ಕಲಾ ವೇದಿಕೆ ಶಿರಸಿ, ಶಿರಸಿ ಕರೋಕೆ ಸ್ಟುಡಿಯೊ ಹಾಗೂ ಅರುಣೋದಯ ಟ್ರಸ್ಟ್ ಶಿರಸಿ ಇವರ ಸಂಯುಕ್ತ ಆಶ್ರಯದಲ್ಲಿ ನ.28 ಭಾನುವಾರದಂದು ಸಂಜೆ 4 ಗಂಟೆಯಿಂದ ನಗರದ ಹೊಟೆಲ್ ಸುಪ್ರಿಯಾ ಇಂಟನ್ರ್ಯಾಶನಲ್‍ನ ಸಭಾಭವನದಲ್ಲಿ ಮರಣೋತ್ತರ ‘ಕರ್ನಾಟಕ ರತ್ನ’ ಗೌರವಕ್ಕೆ ಭಾಜನರಾದ ಮರೆಯಲಾಗದ ನಟ ಪುನೀತ್‍ರಿಗೆ ನಮನ ‘ಕರ್ನಾಟಕ ರತ್ನ’ ನುಡಿ ನಮನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ನುಡಿನಮನವನ್ನು ಕನ್ನಡ ನುಡಿ ಕಿಂಕರ ಹಾಗೂ ಚಿಂತಕರಾದ ಪ್ರೊ. ಕೆ.ಎನ್.ಹೊಸ್ಮನಿ ಹಾಗೂ ಪತ್ರಕರ್ತ ರಾಘವೇಂದ್ರ ಬೆಟ್ಕೊಪ್ಪ ಜಂಟಿಯಾಗಿ ಉದ್ಘಾಟಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲ, ನೋಟರಿ ಸತೀಶ್ ನಾಯ್ಕ ವಹಿಸುವರು. ಮುಖ್ಯ ಅತಿಥಿಗಳಾಗಿ ಶಿರಸಿ ಶಾಮಿಯಾನ ಡೆಕೋರೇಶನ್ ಸಂಘದ ಅಧ್ಯಕ್ಷ ಕೃಷ್ಣ ಗುಡಿಗಾರ್ ಹಾಗೂ ಕರೋಕೆ ಸ್ಟುಡಿಯೋ ಹಾಗೂ ಕದಂಬ ವೇದಿಕೆಯ ನಿರ್ದೇಶಕರಾದ ಗೀತಾ ಸಂತೋಘಿ ಭಾಗವಹಿಸುವರು.
ನಂತರ ಕರೋಕೆ ಕ್ಲಬ್ ಹಾಗೂ ಕದಂಬ ಕಲಾ ವೇದಿಕೆಯ ಗಾಯಕರಿಂದ ಗಾನ ನಮನ ನಡೆಯುವುದೆಂದು ಸಂಘಟಕ ಗಾಯಕ ಶಿರಸಿ ರತ್ನಾಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.