ಕಾರವಾರ: ಉತ್ತರ ಕನ್ನಡ ಸ್ಥಳೀಯ ಸಂಸ್ಥೆಗಳ ಚುನಾವಣಾ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್‍ಗೆ ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಆರು ಅಭ್ಯರ್ಥಿಗಳ ನಾಮಪತ್ರ ಸಿಂಧುವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಇಂದು ತಿಳಿಸಿದ್ದಾರೆ.
ನಾಮಪತ್ರ ಪರಿಶೀಲನೆ ಕಾರ್ಯ ನಡೆದಿದ್ದು ಬಿಜೆಪಿ ಅಭ್ಯರ್ಥಿ ಗಣಪತಿ ದುಮ್ಮಾ ಉಲ್ವೇಕರ್, ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ತಿರುಕಪ್ಪ ನಾಯ್ಕ, ರೈತ ಭಾರತ ಪಾರ್ಟಿಯ ಸೋಮಶೇಖರ್ ವಿ. ಎಸ್. ಪಕ್ಷೇತರರಾಗಿರುವ ಈಶ್ವರ ಗೌಡ, ದತ್ತಾತ್ರಯ ನಾಯ್ಕ, ಪ್ರಕಾಶ ಹೆಗಡೆ ಸಲ್ಲಿಸಿದ ನಾಮಪತ್ರ ಸಿಂಧುವಾಗಿದೆ.