ಶಿರಸಿ: ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ (ರಿ) ವತಿಯಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ 37ನೇ ರಾಜ್ಯ ಮಟ್ಟದ ಸ್ಪೀಡ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಶಿರಸಿಯ ಅದ್ವೈತ ಸ್ಕೇಟರ್ಸ & ಸ್ಪೋಟ್ರ್ಸ್ ಕ್ಲಬ್ (ರಿ) ನ ಸ್ಕೇಟಿಂಗ್ ಕ್ರೀಡಾಪಟು ಕುಮಾರ ಶಂಕರ ಗೌಡ ಇತನು ಕಿರಿಯರ ಬಾಲಕರ ವಿಭಾಗದಲ್ಲಿ ಬಂಗಾರದ ಪದಕ ಪಡೆದಿದ್ದಾನೆ.
ಕಳೆದ ಆರು ತಿಂಗಳಿನಿಂದ ಶಿರಸಿಯ ಅದ್ವೈತ ಸ್ಕೇಟಿಂಗ್ ಕ್ಲಬಿನ ತರಬೇತುದಾರರಾದ ಶ್ಯಾಮಸುಂದರ ಹಾಗೂ ತರುಣ ಗೌಳಿ ಇವರ ಮಾರ್ಗದರ್ಶನದಲ್ಲಿ ಶಂಕರ ಗೌಡ ತರಬೇತಿ ಪಡೆದಿದ್ದು, ಡಿಸೆಂಬರನಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಪಡೆದುಕೊಂಡಿದ್ದಾನೆ.
ಸ್ಕೇಟಿಂಗ್ ಬಾಲಕನ ಈ ಸಾಧನೆಗೆ ಕರ್ನಾಟಕ ರಾಜ್ಯ ಸ್ಕೇಟಿಂಗ್ ತರಬೇತುದಾರ ದಿಲೀಪ್ ಹಣಬರ ಹಾಗೂ ಅದ್ವೈತ ಸ್ಕೇಟಿಂಗ್ ಕ್ಲಬಿನ ಅಧ್ಯಕ್ಷ ಕಿರಣಕುಮಾರ ಶುಭ ಹಾರೈಸಿದ್ದಾರೆ.