ಕಾರವಾರ: ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ದತ್ತು ಮಾಸಾಚರಣೆ ಅಂಗವಾಗಿ ಬಾಲನ್ಯಾಯ ಕಾಯ್ದೆ 2015 ರ ಅಡಿಯಲ್ಲಿ ಕಾನೂನು ಬದ್ಧವಾಗಿ ಮಗುವನ್ನು ದತ್ತುಪಡೆಯುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸೋನಲ್ ಐಗಳ ತಿಳಿಸಿದ್ದಾರೆ.
ಯಾವುದೇ ಅನಾಥ ಪರಿತ್ಯಜಿಸಲ್ಪಟ್ಟ ಅಥವಾ ಒಪ್ಪಿಸಲ್ಪಟ್ಟ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿರವರು ದತ್ತು ಮುಕ್ತ ಎಂದು ಘೋಷಿಸಿ ಆದೇಶ ನೀಡಿದ ನಂತರ ಆ ಮಕ್ಕಳು ದತ್ತಕ್ಕೆ ಅರ್ಹರಾಗಿರುತ್ತಾರೆ. ದತ್ತು ಪಡೆಯಲು ಇಚ್ಛಿಸುವವರು ಮಾನಸಿಕವಾಗಿ, ದೈಹಿಕವಾಗಿ ಸದೃಢವಾಗಿರಬೇಕು ಮತ್ತು ಆರ್ಥಿಕವಾಗಿ ಮಗುವನ್ನು ಸಾಕುವ ಸಾಮರ್ಥ್ಯ ಹೊಂದಿರಬೇಕು.
4 ವರ್ಷದೊಳಗಿನ ಮಗುವನ್ನು 90 ವರ್ಷದೊಳಗಿನವರು, ಒಂಟಿ ಪೋಷಕರಾದರೇ 45 ವರ್ಷದೊಳಗಿನವರು ದತ್ತು ಪಡೆಯಬಹುದಾಗಿದೆ. 4 ರಿಂದ 8 ವರ್ಷದ ಮಗುವನ್ನು 100 ವರ್ಷದೊಳಗಿನವರು, ಒಂಟಿ ಪೋಷಕರಾದರೇ 50 ವರ್ಷದೊಳಗಿನವರು ಹಾಗೂ 8-18 ವರ್ಷದ ಮಗುವನ್ನು 110 ವರ್ಷದೊಳಗಿನವರು, ಒಂಟಿ ಪೋಷಕರಾದರೇ 55 ವರ್ಷದೊಳಗಿನವರು ದತ್ತು ಪಡೆಯಬಹುದಾಗಿದೆ.
ಅರ್ಹ ಆಸಕ್ತರು ಶಿರಸಿಯ ಮರಾಠಿಕೊಪ್ಪ ನಂ.441, ಸಹಾಯ ಟ್ರಸ್ಟ್, ದತ್ತು ಮಕ್ಕಳ ಕೇಂದ್ರದಿಂದ ದತ್ತು ಪಡೆಯಬಹುದಾಗಿದೆ. ಮಕ್ಕಳ ಮಾರಾಟ ಅಪರಾಧವಾಗಿರುತ್ತದೆ. ಮಕ್ಕಳನ್ನು ಮಾರುವವರೆಗೂ ಹಾಗೂ ಕೊಳ್ಳುವವರೆಗೂ ಬಾಲನ್ಯಾಯ ಕಾಯಿದೆ 2015 ಸೆಕ್ಷನ್ 81ರ ಅನ್ವಯ 5 ವ?ಗಳ ಸೆರೆಮನೆ ವಾಸದೊಂದಿಗೆ 1 ಲಕ್ಷಗಳವರೆಗೆ ದಂಡ ವಿಧಿಸಲಾಗುವುದು. ಈ ಅಪರಾಧದಲ್ಲಿ ಆಸ್ಪತ್ರೆಯವರು ಶಾಮೀಲಾದರೆ 3 ರಿಂದ 7 ವ?ಗಳವರೆಗೆ ಕಾರಗೃಹ ಶಿಕ್ಷೆ ಅನುಭವಿಸಬೇಕಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಹಾಗೂ ಇಂತಹ ಅಪರಾಧ ಕಂಡು ಬಂದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ದೂ: 08382-220182 ಯನ್ನು ಸಂಪರ್ಕಿಸಿಸಬಹುದೆಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸೋನಲ್ ಐಗಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.