• Slide
    Slide
    Slide
    previous arrow
    next arrow
  • ಸಿದ್ದಾಪುರದಲ್ಲಿ ಉಳ್ವೇಕರ್ ಪ್ರಚಾರ; ಈ ಬಾರಿ ಪರಿಷತ್’ನಲ್ಲಿ ಉಳ್ವೇಕರ್ ಗೆಲುವು ನಿಶ್ಚಿತ; ಕೆ.ಜಿ ನಾಯ್ಕ

    300x250 AD

    ಸಿದ್ದಾಪುರ: ಸ್ಥಳೀಯ ಸಂಸ್ಥೆಗಳಿಂದ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ್ ಈ ಬಾರಿ ಗೆಲ್ಲುವ ಮೂಲಕ ಬಿಜೆಪಿ ಗೆಲುವು ನಿಶ್ಚಿತ, 2,900 ಮತಗಳಲ್ಲಿ 1,600 ಬಿಜೆಪಿ ಮತಗಳಿದ್ದು, ಗಣಪತಿ ಉಳ್ವೇಕರ್ ಸ್ಪಷ್ಟ ಗೆಲುವು ಸಾಧಿಸಲಿದ್ದಾರೆ ಎಂದು ರಾಜ್ಯ ಕಾರ್ಯಕಾರಿಣಿಬ ಸದಸ್ಯ ಕೆ.ಜಿ ನಾಯ್ಕ ಹಣಜಿಬೈಲ್ ಹೇಳಿದರು.

    ಅವರು ಶುಕ್ರವಾರ ಪಟ್ಟಣದ ಬಾಲ ಮಂದಿರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದರು. ಒಟ್ಟೂ 2,911 ಮತಗಳಲ್ಲಿ ಸಿದ್ದಾಪುರ ತಾಲೂಕಿನಲ್ಲಿ 234 ರಲ್ಲಿ 121 ಸದಸ್ಯರು ಬಿಜೆಪಿಯವರಿದ್ದಾರೆ. ಈ ಹಿಂದಿನ ಘೋಟ್ನೇಕರ್ ಒಮ್ನೆಯೂ ಗ್ರಾಪಂ, ಜಿಪಂ,ತಾಪಂ, ಸ್ಥಳೀಯ ಸಂಸ್ಥೆ ಸದಸ್ಯರ ಸಭೆ ನಡೆಸಿ ಸಮಸ್ಯೆ ಆಲಿಸಿಲ್ಲ. ಒಮ್ಮೆಯೂ ಅಧಿವೇಶನದಲ್ಲಿ ಸಮಸ್ಯೆ ಕುರಿತು ಗಮನ ಸೆಳೆದಿಲ್ಲ. ಈ ಬಾರಿ ಸೋಲು ಖಚಿತ ಎಂದು ತಿಳಿದು ಪರಿಷತ್ ಸ್ಥಾನಕ್ಕೆ ಧಮ್ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. 21 ಆಕಾಂಕ್ಷಿಗಳು ಪ್ರಬಲವಾಗಿದ್ದರೂ ಸಹ ಪಕ್ಷ ನೀಡಿದ ಅಭ್ಯರ್ಥಿಗೆ ಬೆಂಬಲಿಸುತ್ತೇವೆ ಎಂದು ಹೇಳಿದಂತೆ ಕೆಲಸ ಮಾಡುತ್ತಿದ್ದೇವೆ. ಈ ಬಾರಿ ಗಣಪತಿ ಉಳ್ವೇಕರ್ ರನ್ನು ಪ್ರಥಮ‌ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸುವಂತೆ ಕೋರಿದರು.

    ಪರಿಷತ್ ಅಭ್ಯರ್ಥಿ ಗಣಪತಿ ಉಳ್ವೇಕರ್ ಮಾತನಾಡಿ, ಬಿಜೆಪಿ ನನ್ನನ್ನು ಗುರುತಿಸಿ ಟಿಕೇಟ್ ನೀಡಿದ್ದು, ಈ ಹಿಂದೆ ಒಬ್ಬ ಶಾಸಕರಿದ್ದಾಗ 1,500 ಮತ ಪಡೆದಿದ್ದು, ಈ ಬಾರಿ ಐದು ಶಾಸಕರು, ಸಂಸದರು ಹಾಗೂ ಚುನಾಯಿತ ಪ್ರತಿನಿಧಿಗಳು ಹೆಚ್ಚಿರುವುದರಿಂದ 2,100 ಕ್ಕೂ ಹೆಚ್ಚು ಮತ ಬರುವುದರಲ್ಲಿ ಸಂದೇಹವಿಲ್ಲ. ಎಲ್ಲರೂ ಒಗ್ಗೂಡಿ ಮತ ನೀಡಿ, ತಮ್ಮನ್ನು ಆಶಿರ್ವದಿಸಬೇಕೆಂದರು.

    300x250 AD

    ಈ ವೇಳೆ ಸಿದ್ದಾಪುರ ಮಂಡಲದ ಅಧ್ಯಕ್ಷ ನಾಗರಾಜ ನಾಯ್ಕ ಬೇಡ್ಕಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರು ದೇವಾಡಿಗ, ಗೋವಿಂದಾ ನಾಯ್ಕ, ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಚಂದ್ರಕಲಾ ನಾಯ್ಕ, ಮಂಡಲದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಮೇಸ್ತಾ, ಜಿಲ್ಲಾ ಕಾರ್ಯದರ್ಶಿಗಳಾದ ಗುರುಪ್ರಸಾದ ಹೆಗಡೆ, ಕೃಷ್ಣಮೂರ್ತಿ ಕಡಕೇರಿ, ಮಹಾಂತೇಶ ಹಾದಿಮನೆ ಸೇರಿದಂತೆ ಇನ್ನಿತರರು ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top