ಕಾರವಾರ: ಬೈಕ್ ಕಳ್ಳತ ಪ್ರಕರಣ ಸಂಬಂಧ ಅಂತರ್‌ಜಿಲ್ಲಾ ಆರೋಪಿಯನ್ನು ಇಲ್ಲಿನ ಗ್ರಾಮೀಣ ಪೊಲೀಸ್ ಠಾಣಾ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಆನಂದ ನಿಂಗಬಸಪ್ಪ ಛಲವಾದಿ (18) ಬಂಧಿತ ಆರೋಪಿಯಾಗಿದ್ದು, ಚೆಂಡಿಯಾದ ಸಿದ್ದೇಶ ಪ್ರದೀಪ ನಾಯ್ಕ ತಮ್ಮ ಬೈಕ್ ಕಳ್ಳತನವಾಗಿರುವ ಬಗ್ಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆರೋಪಿತನನ್ನು ಬಂಧಿಸಿ, ಬೈಕ್ ವಶಕ್ಕೆ ಪಡೆದಿದ್ದಾರೆ.
ಆರೋಪಿತನು ಅಂತರ್‌ಜಿಲ್ಲಾ ಕಳ್ಳನಾಗಿದ್ದು, ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯ ಹಲವಾರು ಕಡೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ತನಿಖೆಯಿಂದ ತಿಳಿದು ಬಂದಿದೆ.