ಶಿರಸಿ: ನಾಡಿನ ಸುಪ್ರಸಿದ್ಧ ಹಿರಿಯ ವಿದ್ವಾಂಸರು, ಪ್ರಖ್ಯಾತ ಲೇಖಕರು, ಅಂಕಣಕಾರರಾದ ಪ್ರೊ. ಕೆ.ಎಸ್.ನಾರಾಯಣಾಚಾರ್ಯ ಅವರ ನಿಧನದ ಸುದ್ದಿ ತಿಳಿದು ಅತೀವ ದುಃಖವಾಯಿತು ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸಂತಾಪ ಸೂಚಿಸಿದ್ದಾರೆ.
ಶ್ರೀಯುತರು ಧರ್ಮಶಾಸ್ತ್ರದ ಬಗ್ಗೆ ಅನೇಕ ಉಪನ್ಯಾಸಗಳನ್ನು, ಧರ್ಮಜಾಗೃತಿ ಕಾರ್ಯವನ್ನು ಮಾಡುತ್ತಿದ್ದರು. ಇವರು ಬರೆದ ಅನೇಕ ಪೌರಾಣಿಕ ಕಾದಂಬರಿಗಳು ಪ್ರಸಿದ್ದಿಯನ್ನು ಪಡೆದಿದೆ. ಪ್ರಖರ ರಾಷ್ಟ್ರೀಯವಾದಿಗಳಾಗಿದ್ದ ಶ್ರೀಯುತರು ಅನೇಕ ದಿನಪತ್ರಿಕೆಗಳಿಗೆ ರಾಷ್ಟ್ರ ಜಾಗೃತಿಯ ಕುರಿತಂತೆ ಅಂಕಣವನ್ನು ಬರೆಯುತ್ತಿದ್ದರು.
ಭಗವಂತನು ಶ್ರೀಯುತರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ. ಅವರ ಕುಟುಂಬದವರಿಗೆ, ಅಪಾರ ಅಭಿಮಾನಿ ಬಳಗದವರಿಗೆ ಅವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ದಯಪಾಲಿಸಲೆಂದು ಪ್ರಾರ್ಥಿಸಿದ್ದಾರೆ.