ಹೊನ್ನಾವರ: ಗುಂಡಬಾಳ ನಂ.1 ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಸುಧಾ ಭಂಡಾರಿಯವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಈ ಸಂದರ್ಭದಲ್ಲಿ ಶಿಕ್ಷಕಿ ಸುಧಾ ಮಾತನಾಡಿ, ಈ ಶಾಲೆಯ ಪರಿಸರಕ್ಕೂ ನನಗೂ ಅಪೂರ್ವವಾದ ಸಂಬಂಧವಿದೆ. ನನಗೆ ಈ ಶಾಲೆಯನ್ನು ಬಿಟ್ಟು ಹೋಗವುದು ಕಷ್ಟವಾಗಿದೆ. ನಾನು ಶಿಕ್ಷಕಿಯಾದವಳು. ನಾನು ಒಂದೇ ದಿನ ವೇದಿಕೆ ಹತ್ತಿದವಳಲ್ಲ. ಈ ಶಾಲೆಯ ಸಾಂಸ್ಕೃತಿಕ ಜವಾಬ್ದಾರಿ ನನ್ನ ಹೆಗಲಿರಿದಾಗ ನನ್ನ ಹವ್ಯಾಸ ಕೂಡಾ ಜೊತೆ ಸೇರಿದಾಗ ನನ್ನನ್ನು ಒಂದು ಪ್ರತಿಷ್ಠಿತ ಮಟ್ಟಕ್ಕೆ ಕರೆದುಕೊಂಡು ಹೋಯಿತು. ನನ್ನ ಈ ಹವ್ಯಾಸಗಳು ನನ್ನ ವಿದ್ಯಾರ್ಥಿಗಳನ್ನು ಪ್ರಭಾವಿಸದೆ ಇರಲಾರದು ಎಂದರು.
ಆರೋಗ್ಯ ಮಾತಾ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ವಿಲ್ಸನ್ ಮಾತನಾಡಿ, ನದಿ ದಾಟಿದ ಮೇಲೆ ಅಂಬಿಗನ ನೆನೆಯಲಾರರು. ಆದರೆ ಅವರ ವಿದ್ಯಾರ್ಥಿಗಳು ಇಂತಹ ಮನೋಭಾವದವರಲ್ಲ. ಈ ಶಾಲೆಯಿಂದ ನಮ್ಮ ಶಾಲೆಗೆ ಬರುವ ವಿದ್ಯಾರ್ಥಿಗಳು ಅತ್ಯುತ್ತಮವಾಗಿ ಕಲಿಕೆಯಲ್ಲಿ ತೊಡಗಿರುತ್ತಾರೆ ಎಂದರು.
ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯಿ ಮಾದೇವಿ ಭಟ್, ಎಸ್.ಡಿ.ಎಂ.ಸಿ ಅಧ್ಯಕ್ಷ ಮಂಜುನಾಥ ಗೌಡ, ಶಿಕ್ಷಕರಾದ ಗಣಪತಿ ಶೆಟ್ಟಿ, ಎಡ್ವಿನ್ ಮುಂತಾದವರು ಉಪಸ್ಥಿತರಿದ್ದರು.