ಮುಂಡಗೋಡ: ಮನುವಿಕಾಸ ಹಾಗೂ ಈಡಲ್‍ಗೀವ್ ಫೌಂಡೇಶನ್ ಸಹಯೋಗದಲ್ಲಿ ಗಣೇಶಪುರ ಗ್ರಾಮದ ಮಹಿಳೆಯರಿಗೆ ಆಹಾರ ತಯಾರಿಕಾ ತರಬೇತಿ ಕಾರ್ಯಕ್ರಮ ಪ್ರಾರಂಭಿಸಲಾಯಿತು.
ಮನು ವಿಕಾಸ ಸಂಸ್ಥೆಯಿಂದ ಬಸವರಾಜ ರೆಡ್ಡೆರ್ ಪ್ರಾಸ್ತಾವಿಕವಾಗಿ ಮಾತನಾಡಿ, ಮನುವಿಕಾಸ ಸಂಸ್ಥೆಯ ಕಾರ್ಯವೈಖರಿಯನ್ನು ಆಹಾರ ತಯಾರಿಕಾ ತರಬೇತಿ ಮಹತ್ವವನ್ನು ಮಹಿಳೆಯರಿಗೆ ತಿಳಿಸಿದರು.
ಫಕ್ಕೀರೇಶ ಹುಲಿಯವರ ಮಾತನಾಡಿ, ಮನು ವಿಕಾಸ ಸಂಸ್ಥೆ ಮಾಡುತ್ತಿರುವ ಸಾಮಾಜಿಕ ಸೇವಾ ಕಾರ್ಯಕ್ರಮಗಳಲ್ಲಿ ಮಹಿಳೆಯರಿಗೆ ಹಮ್ಮಿಕೊಂಡ ಆಹಾರ ತಯಾರಿಕಾ ತರಬೇತಿ ಉತ್ತಮವಾಗಿದ್ದು, ತರಬೇತಿ ಪಡೆದು ಸ್ವಉದ್ಯೋಗ ಮಾಡಿ ಎಂದರು.
ಶಿವಪುತ್ರ ಹಾನಗಲ್ ಮಾತನಾಡಿ ತರಬೇತಿಯ ಮಹತ್ವ ಪಡೆದುಕೊಳ್ಳಿ. ಸ್ವ-ಉದ್ಯೋಗ ಮಾಡಿ ನಿಮ್ಮ ಆರ್ಥಿಕ ಗುಣಮಟ್ಟವನ್ನು ಸುಧಾರಿಸಿಕೊಳ್ಳಿ ಎಂದು ಹೇಳಿದರು. ಶೇಖರ ನಾಯ್ಕ ಮಾತನಾಡಿ, ತರಬೇತಿಯ ನಿಯಮಾವಳಿಗಳನ್ನು ತಿಳಿಸಿದರು. ತಾಲೂಕಾ ಸಂಯೋಜಕ ಗಣಪತಿ ನಿರ್ವಹಿಸಿದರು. ಬಸವನಗೌಡ ಸ್ವಾಗತಿಸಿದರು