ಮುಂಡಗೋಡ: ತಾಲೂಕಿನ ಮಳಗಿ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾನ್ ಸ್ಟೆಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಜಟ್ಟೆಪ್ಪ ನಾಯ್ಕ ಅವರು ಹವಾಲ್ದಾರ ಆಗಿ ಬಡ್ತಿ ಹೊಂದಿ ಗೋಕರ್ಣ ಪೊಲೀಸ್ ಠಾಣೆಗೆ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಅವರನ್ನು ಮಳಗಿ ಗ್ರಾಮಸ್ಥರು ಸನ್ಮಾನಿಸಿ ಬೀಳ್ಕೊಡುಗೆ ನೀಡಿದರು.
ಸಿಬ್ಬಂದಿಗಳಾದ ರಾಜೇಶ ನಾಯ್ಕ, ಸುರೇಶ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಪ್ರಮೋದ ಡವಳೆ, ರಾಘವೇಂದ್ರ ಪಾಟೀಲ, ಹನುಮಂತ ಶೆಟಗೇರಿ, ಮಂಜುನಾಥ ಹರಿಜನ, ದ್ಯಾಮಣ್ಣ, ವಿನಾಯಕ ಶೆಟ್ಟಿ, ಅಣ್ಣಪ್ಪ ನಾಯ್ಕ, ಮನೋಜ ವಡಕೊಪ್ಪ, ಸುಭಾಸ, ಜಗದೀಶ, ರಘುವೀರ, ಖಾದರ, ಗಣೇಶ, ಮುರಳಿ ಮುಂತಾದವರು ಉಪಸ್ಥತರಿದ್ದರು.