ಮುಂಡಗೋಡ: ತಾಲೂಕಿನ ಟಿಬೇಟಿಯನ್ ಕ್ಯಾಂಪ್ ನ ದಿವ್ಯಾಂಗ ಯುವಕನೊಬ್ಬನು ಕಾಣೆಯಾದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾಣೆಯಾದ ವ್ಯಕ್ತಿ ತಾಶಿ ಲೋಬ್ಸಾಂಗ್ ಗೇಲ್ಸನ್ ಆಗಿದ್ದಾನೆ. ಈತನ ಪ್ರಾಯ 32 ವರ್ಷ ಇದ್ದು 5 ಪುಟ 3 ಇಂಚು ಇದ್ದು ಉದ್ದನೇಯ ಮುಖವಿದ್ದು ಸದೃಢ ಮೈಕಟ್ಟು ಹೊಂದಿದ್ದು ಕಪ್ಪು ಕೂದಲು ಹಾಗೂ ಕೆಂಪು ಮೈ ಬಣ್ಣದವನಾಗಿದ್ದು. ಈತನು ಹಿಂದಿ ಭಾಷೆ ಮಾತನಾಡುತ್ತಾನೆ. ಮನೆಯಿಂದ ಹೋಗುವಾಗ ನೀಲಿ ಬಣ್ಣದ ಟೀ ಶರ್ಟ್ ಕಪ್ಪು ಬಣ್ಣದ ಹಾಪ್ ಪ್ಯಾಂಟ್ ಧರಿಸಿದ್ದು ಅವನು ಅಂಗವಿಕಲನಿದ್ದವನು ಮನೆಯಿಂದ ಎಲ್ಲಿಯೂ ಹೋಗಿ ಕಾಣೆಯಾಗಿದ್ದಾನೆ. ಕಾಣೆಯಾದವನನ್ನು ಹುಡುಕಿಕೊಡುವಂತೆ ಕುಟುಂಬಸ್ಥರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.