ಸಿದ್ದಾಪುರ: ವಿಧಾನ ಪರಿಷತ್ ಚುನಾವಣೆ ನಿಮಿತ್ತ ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ್ ನ.26 ಶುಕ್ರವಾರದಂದು ಸಿದ್ದಾಪುರದಲ್ಲಿ ಪ್ರಚಾರ ಸಭೆ ನಡೆಸುವರು.
ಬೆಳಿಗ್ಗೆ ಹಲಗೇರಿಯಲ್ಲಿ 10ರಿಂದ 11 ಗಂಟೆವರೆಗೆ, ದೊಡ್ಮನೆಯಲ್ಲಿ 11.30ರಿಂದ 12.30 ರವರೆಗೆ, ಸಿದ್ದಾಪುರ ನಗರದಲ್ಲಿ ಮಧ್ಯಾಹ್ನ 1ರಿಂದ 2 ಗಂಟೆವರೆಗೆ ಮತ್ತು ಅಣಲೇಬೈಲಿನಲ್ಲಿ ಮಧ್ಯಾಹ್ನ 3ರಿಂದ 4ಗಂಟೆವರೆಗೆ ಪ್ರಚಾರ ಸಭೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರು, ಪಂಚಾಯತ ಸದಸ್ಯರು ಹಾಜರಿರುವರು.