ಭಟ್ಕಳ: ಧ್ಯಾನದಿಂದ ಬುದ್ದನಿಗೆ ಹೇಗೆ ಬೋಧಿ ವೃಕ್ಷದ ಕೆಳಗೆ ಜ್ಞಾನೋದಯವಾಯಿತೋ ಹಾಗೆಯೇ ವಿದ್ಯಾರ್ಥಿಗಳು ತಮ್ಮ ಶಾಲೆಗಳಲ್ಲಿ ವಿದ್ಯಾರ್ಜನೆಯಿಂದ ಜ್ಞಾನ ಹೆಚ್ಚಿಸಿಕೊಳ್ಳಬೇಕೆಂದು ಪೈ ಆಟೋ ಮೋಬೈಲ್ಸ್ ಮಾಲೀಕ ಅಶೋಕ ಪೈ ಹೇಳಿದರು.
ಅವರು ಶಿರಾಲಿಯ ಸಿದ್ಧಾರ್ಥ ಪದವಿ ಮಹಾವಿದ್ಯಾಲಯದಲ್ಲಿ ಹೊಸ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, ಮಾತನಾಡುತ್ತಿದ್ದರು. ನಾವು ವಿದ್ಯೆ ಪಡೆದಲ್ಲಿ ತಮ್ಮ ಜೀವನದಲ್ಲಿ ಮುಂದೆ ಬರುವ ಸಮಸ್ಯೆಗಳನ್ನು ಎದುರಿಸುವ ಶಕ್ತಿ ವಿದ್ಯಾರ್ಥಿಗಳಲ್ಲಿ ಬಂದು ಜೀವನ ಸಾರ್ಥಕವಾಗುತ್ತದೆ. ಕಾಲೇಜಿನಲ್ಲಿ ದೊರೆಯುವ ಎಲ್ಲಾ ಶಿಕ್ಷಣ ಚಟುವಟಿಕೆಗಳ ಸದುಪಯೋಗ ಪಡೆದುಕೊಂಡು ಹೊಸ ವಿದ್ಯಾರ್ಥಿಗಳು ಮುಂದೆ ಬರಬೇಕು ಎಂದರು.
ಸಿದ್ಧಾರ್ಥ ಎಜುಕೇಶನ್ ಟ್ರಸ್ಟಿನ ಅಧ್ಯಕ್ಷ ಹಾಗೂ ಸಿದ್ಧಾರ್ಥ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಅರ್ಚನಾ ಯು. ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಿದ್ಧಾರ್ಥ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಸುಜ್ಞಾನ ಎಸ್. ಬೈಂದೂರ ಪ್ರಾಸ್ತಾವಿಕ ಮಾತನಾಡಿದರು. ಈ ಸಂದರ್ಭದಲ್ಲಿ 2019-20ರ ಬಿ.ಎಸ್ಸಿ ಹಾಗೂ ಬಿ.ಕಾಂನ ಅಗ್ರಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಹಿರಿಯ ಉಪನ್ಯಾಸಕಿ ಶಾಂತಲಾ ಶ್ಯಾನಭಾಗ ಅತಿಥಿಗಳನ್ನು ಸ್ವಾಗತಿಸಿದರು. ವಿದ್ಯಾರ್ಥಿಗಳಾದ ವಿಶಾಲಾಕ್ಷಿ ಪಿ. ನಾಯ್ಕ ಹಾಗೂ ತೇಜಸ್ವಿನಿ ದೇವಾಡಿಗ ನಿರೂಪಿಸಿದರು. ಉಪನ್ಯಾಸಕ ಅಪೂರ್ವ ಪ್ರಭು ಗೌರವ ವಂದಿಸಿದರು. ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕøತಿಕ ಕಾರ್ಯಕ್ರಮ ಎಲ್ಲರನ್ನು ಮೆಚ್ಚಿಸುವಲ್ಲಿ ಯಶಸ್ವಿಯಾಯಿತು.