ಕಾರವಾರ: ಭಾರತದ ಅತ್ಯಂತ ಪವಿತ್ರ ಕ್ಷೇತ್ರಗಳಲ್ಲಿ ಮುರುಡೇಶ್ವರ ಒಂದು. ಅದರಲ್ಲೂ ಈಶ್ವರನೆಂದರೆ ಹಿಂದುಗಳ ಆರಾಧ್ಯ ದೈವ. ಪ್ರವಾಸದ ದೃಷ್ಟಿಯಿಂದಲೂ ಇದು ಇಡೀ ಜಗತ್ತಿನ ಗಮನ ಸೆಳೆದಿದೆ. ಅಂಥ ಪ್ರದೇಶದಲ್ಲಿರುವ ಬೃಹತ್ ಶಿವನ ವಿಗ್ರಹದ ರುಂಡವನ್ನು ತೆರೆದು ಇಸಿಸ್ ನವರು ಪತ್ರಿಕೆಯಲ್ಲಿ ಹಾಕಿರುವುದನ್ನು ಖಂಡಿಸುತ್ತೇವೆ ಎಂದು ಬಿಜೆಪಿ ಜಿಲ್ಲಾ ವಕ್ತಾರ, ವಕೀಲ ನಾಗರಾಜ ನಾಯಕ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂಥ ಪೊಳ್ಳು ಬೆದರಿಕೆಗೆ ನಾವು ಹೆದರುವುದಿಲ್ಲ. ಮುರುಡೇಶ್ವರದ ಈಶ್ವರನ ರುಂಡವನ್ನು ಕತ್ತರಿಸಿದರೆ ದೇಶದ ಜನ ಸುಮ್ಮನೆ ಕುಳಿತುಕೊಳ್ಳಲ್ಲ. ನಾವ್ಯಾರೂ ಕೈಗೆ ಬಳೆ ತೊಟ್ಟು ಕುಳಿತಿಲ್ಲ. ಇದು ಕೇವಲ ಮುರುಡೇಶ್ವರದ ಬಗ್ಗೆ ಹೇಳಿದ್ದಲ್ಲ. ಭಾರತದ ಸಮಗ್ರತೆ, ಭದ್ರತೆಯ ವಿರುದ್ಧ ಕೊಟ್ಟ ಒಂದು ಹೇಳಿಕೆ, ಈ ಧಮ್ಕಿಯನ್ನು ನಮ್ಮ ಸರ್ಕಾರ, ಕೇಂದ್ರ ಸರ್ಕಾರ ಬಹಳ ತೀವ್ರವಾಗಿ ಪರಿಗಣಿಸುತ್ತದೆ ಎಂಬ ನಂಬಿಕೆಯಿದೆ. ಮತ್ತು ಅದನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ನಾವು ಮನವಿ ಮಾಡಿದ್ದೇವೆ. ನಾವೆಲ್ಲ, ದೇಶದ ಜನರೆಲ್ಲ ಈ ಉಗ್ರವಾದ ವಿರುದ್ಧ ತೊಡೆ ತಟ್ಟಿ ನಿಲ್ಲಬೇಕೆಂದು ನಾವು ಹೇಳುತ್ತೆವೆ.
ಈ ಸಂದರ್ಭದಲ್ಲಿ ಜಾತ್ಯಾತೀತ, ಬುದ್ದಿಜೀವಿಗಳಿಗೆ ಒಂದು ಸಂದೇಶವೆಂದರೆ ಜಾತ್ಯಾತೀತತೆಯ ಹುಸಿ ಪಾಠ, ಭಜನೆಯನ್ನು ಮಾಡುತ್ತಿರುವಿರಲ್ಲ ಅದರ ಪರವಾಗಿ ನಮ್ಮ ಅಂಗಳಕ್ಕೆ ಬಂದು ಧಮ್ಕಿ ನೀಡುವ ಪರಿಸ್ಥಿತಿ ಇಂದು ಉದ್ಭವಿಸಿದೆ. ಇದಕ್ಕೆ ನೀವೆಲ್ಲ ಕಾರಣೀಕರ್ತರು. ನೀವು ಕೆಟ್ಟದ್ದನ್ನು ನೋಡಿಯೂ ಸುಮ್ಮನೆ ಕುಳಿತರೆ ಅದರ ಜೊತೆನೀವು ಶಾಮಿಲೆಂದು ತಿಳಿದುಕೊಳ್ಳಬೇಕಾಗುತ್ತದೆ. ಇಂದು ನಮ್ಮಮನೆಯಂಗಳಕ್ಕೆ ಬಂದಿದ್ದು, ಮನೆ ಒಳಗೇ ಬರುತ್ತದೆ. ಹಾಗಾಗಿ ಇಂಥದ್ದನ್ನೆಲ್ಲ ಸರ್ಕಾರ ಬಹಳ ತೀವ್ರವಾಗಿ ಜನರು ಪರಿಗಣಿಸುತ್ತಾರೆ ಎಂದಿದ್ದಾರೆ.