• Slide
    Slide
    Slide
    previous arrow
    next arrow
  • ಕಾರವಾರ- ಬೆಂಗಳೂರು ಬಸ್ ಸಂಚಾರ ಆರಂಭ

    300x250 AD

    ಕಾರವಾರ: ಪ್ರಯಾಣಿಕರ ಬೇಡಿಕೆ ಮೇರೆಗೆ ಕಾರವಾರ-ಬೆಂಗಳೂರು ನಾನ್ ಎಸಿ ಸ್ಲೀಪರ್ ಸಾರಿಗೆ ಬಸ್’ನ್ನು ಪ್ರಾರಂಭಿಸಲಾಗಿದೆ ಎಂದು ವಾಕರಸಾ ಸಂಸ್ಥೆ ಶಿರಸಿ ವಿಭಾಗೀಯ ನಿಯಂತ್ರಣಾಧಿಕಾರಿರಾಜಕುಮಾರ ತಿಳಿಸಿದ್ದಾರೆ.

    300x250 AD

    ಈ ಬಸ್ ವಾಯಾ ಅಂಕೋಲಾ, ಯಲ್ಲಾಪುರ,ಕಲಘಟಗಿ, ಹುಬ್ಬಳ್ಳಿ, ದಾವಣಗೆರೆ, ಚಿತ್ರದುರ್ಗ ಮಾರ್ಗದಲ್ಲಿ ಸಂಚರಿಸಲಿದೆ. ಕಾರವಾರದಿಂದ ಸಂಜೆ 7.45 ಗಂಟೆಗೆ ಹೊರಟು ಬೆಂಗಳೂರನ್ನು ಮುಂಜಾನೆ 7.45 ಕ್ಕೆ ತಲುಪುತ್ತದೆ. ಬೆಂಗಳೂರಿನಿಂದ ರಾತ್ರಿ 8.15 ಗಂಟೆಗೆ ಹೊರಟುಕಾರವಾರಕ್ಕೆ ಮುಂಜಾನೆ 8.00 ಗಂಟೆಗೆ ತಲುಪುತ್ತದೆ. ಸಾರ್ವಜನಿಕ ಪ್ರಯಾಣಿಕರು ಈ ಸಾರಿಗೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕು ಮತ್ತು ksrtc.in ವೆಬ್‍ಸೈಟ್ ಮೂಲಕ ಅಥವಾ ಸಮೀಪದ ಬಸ್ ನಿಲ್ದಾಣದ ರಿಸರ್ವೇಶನ್ ಕೌಂಟರ್‍ಗಳಲ್ಲಿ ಮುಂಗಡ ಟಿಕೇಟ್ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top