ಕಾರವಾರ: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ ನಿಯಮಿತದಿಂದ 2021-22ನೇ ಸಾಲಿಗೆ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ, ಜೈನ, ಸಿಖ್, ಬೌದ್ಧ ಹಾಗೂ ಪಾರ್ಸಿ ಸಮುದಾಯದ ಅರ್ಹ ವಿದ್ಯಾರ್ಥಿಗಳಿಂದ ಅರಿವು ರಿನ್ಯೂವಲ್ ಸಾಲ ಯೋಜನೆಯಡಿಯಲ್ಲಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (ಏಇಂ)ಸಿ.ಇ.ಟಿ, ನೀಟ್‍ನಲ್ಲಿ ಆಯ್ಕೆಯಾದ ವೈದ್ಯಕೀಯ (MBBS) ಹಾಗೂ ಬಿ.ಡಿ.ಎಸ್, ಬಿ.ಇ, ಬಿ.ಟೆಕ್, ಬ್ಯಾಚುಲರ್ ಆಫ್‍ಆರ್ಕಿಟೆಕ್ಚರ್ ಮತ್ತು ಆಯುಶ್ ಇಂತಹ ಪದವಿ ಕೋರ್ಸ್‍ಗಳಲ್ಲಿ ಆಯ್ಕೆಯಾಗಿ, ಸಾಲ ಪಡೆಯಲು ಅಪೇಕ್ಷಿಸುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ನಿಗಮದ ವೆಬ್‍ಸೈಟ್ kmdconline.karnataka.gov.in ಆನಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 20 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರು, ಜಿಲ್ಲಾ ವ್ಯವಸ್ಥಾಪಕರ ಕಛೇರಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ(ನಿ) ವಾಸೀಂ ಮಂಜಿಲ್, 1ನೇ ಮಹಡಿ, ಹೈಚರ್ಚರಸ್ತೆ, ಕಾರವಾರ. ದೂರವಾಣಿ ಸಂಖ್ಯೆ:08382-221180 ಸಂಪರ್ಕಿಸಬಹುದಾಗಿದೆ ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ