• Slide
  Slide
  Slide
  previous arrow
  next arrow
 • ಜೀವನದ ಯಶಸ್ಸಿಗೆ ಮೌಲ್ಯಯುತ ಗುಣ ಮುಖ್ಯ; ವಿಜಯಾ ನಾಯ್ಕ

  300x250 AD

  ಕಾರವಾರ: ಜೀವನದಲ್ಲಿ ಉತ್ತಮ ಗುಣಗಳನ್ನು ಬೆಳೆಸಿಕೊಂಡು ಅದನ್ನು ಜೀವನದುದ್ದಕ್ಕೂ ಜಾರಿಯಲ್ಲಿಟ್ಟಾಗ ಯಶಸ್ಸು ತಾನಾಗಿಯೇ ಬರುತ್ತದೆ. ಹಾಗೂ ನಿರುದ್ಯೋಗ ನಿರ್ಮೂಲನೆಗೆ ದೇಶಪಾಂಡೆ ಸ್ಪೆಲಿಂಗ್ ಹುಬ್ಬಳ್ಳಿ ಮಹತ್ವದ ಕಾರ್ಯಕ್ರಮಗಳನ್ನು ಮಾಡುತ್ತಿದೆ ಎಂದು ಸರಕಾರಿ ಕಲಾ ಮತ್ತು ವಿಜ್ಞಾನ ಪದವಿ ಕಾಲೇಜು ಕಾರವಾರದ ಪ್ರಾಂಶುಪಾಲೆ ವಿಜಯಾ ನಾಯ್ಕ ಅಭಿಪ್ರಾಯಪಟ್ಟರು.

  ಇಲ್ಲಿನ ಸರಕಾರಿ ಕಲಾ ಮತ್ತು ವಿಜ್ಞಾನ ಪದವಿ ಕಾಲೇಜು ಕಾರವಾರ ಹಾಗೂ ದೇಶಪಾಂಡೆ ಸ್ಪೆಲ್ಲಿಂಗ್ ಹುಬ್ಬಳ್ಳಿ ಇವರ ಸಹಯೋಗದಲ್ಲಿ ನಡೆದ ಸ್ಕಿಲ್ ಪ್ಲಸ್ ಜಾಬ್ ನೆಕ್ಸ್ಟ್ ಎಂಬ ವಿಶೇಷ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ನಮ್ಮ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ವೃತ್ತಿ ಬದುಕಿಗೆ ನೆರವಾಗುವ ಕೌಶಲ್ಯಗಳನ್ನು ತರಬೇತಿ ನೀಡುವ ಮೂಲಕ ಉದ್ಯೋಗ ಅವಕಾಶವನ್ನು ದೊರಕಿಸಿಕೊಡುವ ಈ ಕಾರ್ಯಕ್ರಮ ಅಪರೂಪದ್ದಾಗಿದೆ ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆದು ಮಾದರಿ ನಾಗರಿಕರಾಗಿ ಎಂದು ಸಲಹೆ ನೀಡಿದರು.

  300x250 AD

  ದೇಶಪಾಂಡೆ ಸ್ಕಿಲ್ಲಿಂಗ್ ನ ಜಿಲ್ಲಾ ಮುಖ್ಯಸ್ಥರಾದ ಶ್ರೀನಿವಾಸ್ ನಾಯ್ಕ ಮಾತನಾಡಿ ಕಾಲೇಜಿನ ವಿದ್ಯಾರ್ಥಿಗಳಿಗೆ ನೆರವಾಗುವ ಕೌಶಲ್ಯ ತರಬೇತಿಯನ್ನು ದೇಶಪಾಂಡೆ ಸ್ಕಿಲ್ಲಿಂಗ್ ಪರಿಚಯಿಸಿದ್ದು ಈ ಕಾರ್ಯಕ್ರಮವನ್ನು ಕಾಲೇಜಿನಲ್ಲಿ ನಡೆಸಲು ಅನುಮೋದನೆ ನೀಡಿದ ಪ್ರಾಂಶುಪಾಲರು ಹಾಗೂ ಕಾಲೇಜಿನ ಸಿಬ್ಬಂದಿಗಳಿಗೆ ಧನ್ಯವಾದಗಳನ್ನು ತಿಳಿಸಿದರು. ಸ್ಕಿಲ್ ಪ್ಲಸ್ ಕಾರ್ಯಕ್ರಮವು ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರದ ಜೊತೆಗೆ ಉದ್ಯೋಗವನ್ನು ಪಡೆಯುವ ಅವಕಾಶವನ್ನು ನೀಡುತ್ತಿದೆ ಹಾಗೂ ಇದರ ಸದುಪಯೋಗವನ್ನು ಎಲ್ಲರೂ ಪಡೆಯಬೇಕೆಂದು ಹೇಳಿದರು.

  ಸುಮಾರು ಮೂರು ಗಂಟೆಯ ಕಾರ್ಯಗಾರದಲ್ಲಿ ದೇಶಪಾಂಡೆ ಸ್ಕಿಲ್ಲಿಂಗ್ ನ ಅಧಿಕಾರಿಗಳು ಸ್ಕಿಲ್ ಪ್ಲಸ್ ಕಾರ್ಯಕ್ರಮದ ರೂಪುರೇಷೆಗಳನ್ನು ಹಾಗೂ ಪ್ರಯೋಜನಗಳನ್ನು ವಿದ್ಯಾರ್ಥಿಗಳಿಗೆ ಅತ್ಯುತ್ತಮ ರೀತಿಯಲ್ಲಿ ತಿಳಿಸಿದರು ಹಾಗೂ ಇಂದಿನ ಉದ್ಯೋಗ ಮಾರುಕಟ್ಟೆಯಲ್ಲಿರುವ ಅವಕಾಶಗಳು ವಂಚನೆಗಳು ಮತ್ತು ಉದ್ಯೋಗ ಪಡೆಯಲು ಅವಶ್ಯವಿರುವ ಕೌಶಲ್ಯಗಳ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು.
  ಕಾರ್ಯಾಗಾರದಲ್ಲಿ ದೇಶಪಾಂಡೆ ಸ್ಪೆಲ್ಲಿಂಗ್ ಅಧಿಕಾರಿಗಳಾದ ಅಫ್ತಾಬ್, ರಾಜಶ್ರೀ, ಶಿವರಾಜ್ ಹಾಗೂ ಗುರುಸಿದ್ದಯ್ಯ ಭಾಗವಹಿಸಿದ್ದರು. ಕಾಲೇಜಿನ ಪ್ಲೇಸ್ಮೆಂಟ್ ಆಫೀಸರ್ ಪೆÇ್ರ. ರಾಘವೇಂದ್ರ ನಿರೂಪಿಸಿದರು. ಕಾರ್ಯಗಾರದಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top