ಹೊನ್ನಾವರ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 69ರ ಭಾಸ್ಕೇರಿಯ ವರ್ನಕೇರಿ ತಿರುವಿನಲ್ಲಿ ಕಾರ್-ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ಕಾರು ಚಾಲಕ ಆರೋಪಿತ ರಾಘವೇಂದ್ರ ಮೇಸ್ತ ಎಂದು ಗುರುತಿಸಿದ್ದು, ಗೇರುಸೊಪ್ಪ ಕಡೆಯಿಂದ ಹೊನ್ನಾವರ ಕಡೆಗೆ ಅತೀ ವೇಗವಾಗಿ ಹಾಗೂ ಅಜಾಗರೂಕತೆಯಿಂದ ಕಾರ್ ಚಲಾಯಿಸಿಕೊಂಡು ಬಂದು, ಹೊನ್ನಾವರ ಕಡೆಯಿಂದ ಗೇರುಸೊಪ್ಪ ಕಡೆಗೆ ಚಲಿಸುತ್ತಿದ್ದ ಬೈಕ್‍ಗೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಬೈಕ್ ಜಖಂಗೊಂಡು ರಸ್ತೆಪಕ್ಕದ ಹೊಂಡಕ್ಕೆ ಬಿದ್ದಿದೆ.
ಬೈಕ್ ಸವಾರ ಮಂಜುನಾಥ ಗೌಡ, ಹಿಂಬದಿ ಕುಳಿತಿದ್ದ ಸವಿತಾ ಗೌಡ ಹಾಗೂ ಮಕ್ಕಳಾದ ಮಧುಶ್ರಿ ಗೌಡ, ಮಾನ್ಯಶ್ರೀ ಗೌಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊನ್ನಾವರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.