ಅಂಕೋಲಾ: ತಾಲೂಕಿನ ಗಾಬಿತಕೇಣಿಯಲ್ಲಿ ಈ ಮೊದಲು ಎಂಟು ಬಸ್‍ಗಳು ಸಂಚರಿಸುತ್ತಿದ್ದು, ಈಗ ಕೇವಲ ಎರಡರಿಂದ ಮೂರು ಬಸ್‍ಗಳು ಮಾತ್ರ ಬರುತ್ತಿವೆ. ಇದರಿಂದಾಗಿ ಶಾಲಾ-ಕಾಲೇಜಿನ ಮಕ್ಕಳಿಗೆ ತುಂಬಾ ತೊಂದರೆಯಾಗುತ್ತಿದೆ. ಸೂಕ್ತ ಬಸ್ ವ್ಯವಸ್ಥೆ ಇಲ್ಲದೇ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪರದಾಡುವಂತಾಗಿದೆ. ಶೀಘ್ರದಲ್ಲೇ ಈ ಮೊದಲಿದ್ದ ಬಸ್ ಸಂಚಾರವನ್ನು ಪುನರಾರಂಭಿಸುವಂತೆ ಕರಾವಳಿ ನವನಿರ್ಮಾಣ ಸೇನೆಯ ಸದಸ್ಯ ಸಿದ್ದಾರ್ಥ ಚೋಡನಕರ ಅಂಕೋಲಾ ಬಸ್ ಘಟಕಕ್ಕೆ ಮನವಿ ಸಲ್ಲಿಸಿದರು.