ಅಂಕೋಲಾ: ಇಲ್ಲಿನ ಲಕ್ಷ್ಮೇಶ್ವರ ಶ್ರೀ ಮಹಾಸತಿ ದೇವಸ್ಥಾನದ ಪಲ್ಲಕ್ಕಿ ಸಮರ್ಪಣಾ ಧಾರ್ಮಿಕ ಕಾರ್ಯಕ್ರಮವನ್ನು ರಾಜು ಸುರೇಶ ನಾಯ್ಕ ಅವರು ಶ್ರೀ ದೇವರಿಗೆ ಪಲ್ಲಕ್ಕಿ ಸಮರ್ಪಿಸಿ ಶ್ರದ್ಧಾ-ಭಕ್ತಿಯಿಂದ ನೆರವೇರಿಸಿದರು.
ಇಂದಿನಿಂದ ಶ್ರೀ ಮಹಾಸತಿ ದೇವರ ವಾರ್ಷಿಕ ವಧರ್ಂತಿ ಉತ್ಸವ ನಡೆಯಲಿದ್ದು, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಶ್ರೀ ದೇವಿ ಸೂಕ್ತ ಹವನ ನಡೆಯಲಿದ್ದು, ಮಧ್ಯಾಹ್ನ ಮಹಾಪೂಜೆ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ. ನಂತರ ಸಂಜೆ 4 ಗಂಟೆಯಿಂದ ಶ್ರೀ ದೇವರ ಪಲ್ಲಕ್ಕಿ ಮೆರವಣೆಗೆ ನಡೆಯಲಿದೆ. ಪಲ್ಲಕ್ಕಿ ಮೆರವಣಿಗೆಯು ಕುಂಬಾರಕೇರಿ ಮಹಾಸತಿ ದೇವಸ್ಥಾನದಿಂದ ಹೊರಟು ಶಂಕರನಾರಾಯಣ, ಕದಂಬೇಶ್ವರ, ಪಳ್ಳಿಕೇರಿ, ಕನಸೆಗದ್ದೆ, ಹೊನ್ನೆಕೇರಿ, ಕೇಣಿ ಮಾರ್ಗವಾಗಿ ಶಾಂತಾದುರ್ಗಾ ದೇವಸ್ಥಾನ, ಕಾಳಮ್ಮ ದೇವಸ್ಥಾನ, ಲಕ್ಷ್ಮೇಶ್ವರ ದತ್ತಾತ್ರಯ ದೇವಸ್ಥಾನಕ್ಕೆ ತೆರಳಿ ಅಲ್ಲಿಂದ ಕುಂಬಾರಕೇರಿಯ ಮೂಲಸ್ಥಾನಕ್ಕೆ ಮರಳಲಿದೆ.
ಬುಧವಾರದಂದು ಶ್ರೀ ದೇವರ ಸಮರ್ಪಣಾ ಧಾರ್ಮಿಕ ಕಾರ್ಯಕ್ರಮವು ವೈಭವದಿಂದ ನಡೆಯಿತು. ಕಲಾಕಾರ ವಿನಾಯಕ ಗುಡಿಗಾರ, ಸುಭಾಷ ಗುಡಿಗಾರ ಅವರು ಸುಂದರವಾದ ಪಲ್ಲಕ್ಕಿಯನ್ನು ನಿರ್ಮಿಸಿದ್ದರು. ಈ ಸಂದರ್ಭದಲ್ಲಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಮೋಹನ ನಾಯ್ಕ, ಪ್ರ.ಕಾರ್ಯದರ್ಶಿ ಸುನೀಲ ನಾಯ್ಕ, ಉಪಾಧ್ಯಕ್ಷ ಗಣಪತಿ ನಾಯ್ಕ, ಸಹ ಕಾರ್ಯದರ್ಶಿ ಧನಂಜಯ ನಾಯ್ಕ, ಸುರೇಶ ನಾಯ್ಕ, ಶ್ರೀನಿವಾಸ ರಾಮನಾಥಕರ, ರಾಜು ನಾಯ್ಕ, ನಂದನ ನಾಯ್ಕ, ರಾಮು ನಾಯ್ಕ, ಉಮೇಶ ನಾಯ್ಕ, ರವಿ ನಾಯ್ಕ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.