ಅಂಕೋಲಾ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ತುಳಸಿ ಗೌಡರಿಗೆ ಗದಗದ ಸಹೃದಯಿ ಬಳಗದವರು ಸನ್ಮಾನಿಸಿ ಗೌರವಿಸಿದರು.
ಫಕೀರಪ್ಪ ಯಲ್ಲಪ್ಪ ಮಜ್ಜಿಗುಡ್ಡ ಮಾತನಾಡಿ, ತುಳಸಿಯವರು ನಮ್ಮ ದೇಶದ ಆಸ್ತಿ. ತೆರೆಮರೆಯಲ್ಲೇ ಅವರು ಕೆಲಸ-ಕಾರ್ಯ ಮಾಡುತ್ತ ಬಂದಿದ್ದಾರೆ. ಅವರನ್ನು ಗೌರವಿಸಿದ್ದು ಹೆಮ್ಮೆಯ ವಿಷಯ. ಆದ್ದರಿಂದ ಗದಗದಿಂದ ಆಗಮಿಸಿ ಗೌರವಿಸಲಾಗಿದೆ. ಅವರ ಆಶೀರ್ವಾದ ಪಡೆದದ್ದು ಸಂತಸ ತಂದಿದೆ ಎಂದರು.
ಈ ಸಂದರ್ಭದಲ್ಲಿ ಶಕುಂತಲಾ ಫ. ಮಜ್ಜಿಗುಡ್ಡ, ಅಂಕೋಲಾ ಕೆನರಾ (ಸಿಂಡಿಕೇಟ್ ಬ್ಯಾಂಕ್) ಹಿರಿಯ ಶಾಖಾ ವ್ಯವಸ್ಥಾಪಕ ವೆಂಕಟೇಶ ಮಜ್ಜಿಗುಡ್ಡ, ಸುಮಂಗಲಾ ವೆಂಕಟೇಶ, ಅಂಕೋಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಘು ಕಾಕರಮಠ ಉಪಸ್ಥಿತರಿದ್ದರು.