• Slide
    Slide
    Slide
    previous arrow
    next arrow
  • ಯಡಳ್ಳಿ ಸೊಸೈಟಿ ವಾರ್ಷಿಕ ಸರ್ವಸಾಧಾರಣ ಸಭೆ: ಹಿರಿಯ ಸದಸ್ಯರಿಗೆ ಸಮ್ಮಾನ

    300x250 AD


    ಶಿರಸಿ: ಕಾನಗೋಡ ಗ್ರೂಪ್ ವಿವಿಧೋದ್ಧೇಶಗಳ ಸಹಕಾರಿ ಸಂಘ ಯಡಳ್ಳಿ ಇದರ 73ನೇ ವಾರ್ಷಿಕ ಸರ್ವಸಾಧಾರಣ ಸಭೆ ಬುಧವಾರ ಸಂಘದ ಸಭಾಭವನದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಗಣಪತಿ ರಾಮಚಂದ್ರ ಹೆಗಡೆ ಬೆಳ್ಳೆಕೇರಿ ಅಧ್ಯಕ್ಷತೆಯಲ್ಲಿ ನಡೆಯಿತು.


    31-3-2021ಕ್ಕೆ ಅಂತ್ಯಗೊಂಡ ಆರ್ಥಿಕ ವರ್ಷದಲ್ಲಿ ಸಂಘವು 25,21,714ರೂ. ನಿಕ್ಕಿ ಲಾಭ ಗಳಿಸಿದ್ದು ಶೇರು ಸದಸ್ಯರಿಗೆ ಶೇ.6.5ರಂತೆ ಲಾಭಾಂಶ ನೀಡಲು ತೀರ್ಮಾನಿಸಿರುವುದಾಗಿ ಅಧ್ಯಕ್ಷರು ಸಭೆಗೆ ತಿಳಿಸಿದರು.ಆರ್ಥಿಕ ವರ್ಷದಲ್ಲಿ 1470 ಅ ವರ್ಗದ ಸದಸ್ಯರು, 43 ಬ ವರ್ಗದ ಸದಸ್ಯರಿದ್ದಾರೆ. ಶೇರು ಬಂಡವಾಳ 1,38,39,610ರೂ., ಕಾಯ್ದಿಟ್ಟ ನಿ„ 85,86,829ರೂ.,ಸದಸ್ಯರ ಠೇವುಗಳು 38,76,71,56ರೂ.,ಸಿಬ್ಬಂದಿಗಳ ಭವಿಷ್ಯನಿ„ ಠೇವು 66,47, 517ರೂ.ಇದೆ. ವಿವಿಧ ಸಂಸ್ಥೆಗಳಲ್ಲಿ ಶೇರು ರೂಪದಲ್ಲಿ 13,53,000ರೂ.,ಠೇವು ರೂಪದಲ್ಲಿ 16,71,98,573ರೂ.ಗಳನ್ನು ಗುಂತಾಯಿಸಲಾಗಿದೆ . ಸದಸ್ಯರಿಗೆ 22,33,57,005ರೂ. ವಿವಿಧ ರೂಪದ ಸಾಲಗಳನ್ನು ನೀಡಲಾಗಿದೆ ಎಂದು ತಿಳಿಸಿದರು. ಸಂಘದಿಂದ ಸಿಗುವ ವಿವಿಧ ಸೌಲಭ್ಯಗಳನ್ನು, ಸಂಘದ ವಿವಿಧ ಯೋಜನೆಗಳ ಬಗ್ಗೆ ತಿಳಿಸಲಾಯಿತು.


    ಎಂ ಎನ್ ಹೆಗಡೆ ಮುಂಡಗೇಸರ, ದತ್ತಾತ್ರೇಯ ಉಮಾಪತಿ ಭಟ್ ಕರಸುಳ್ಳಿ, ಗಣೇಶ ಭಟ್ ಸಣ್ಣಕೇರಿ, ಕೃಷ್ಣ ಹೆಗಡೆ ಯಡಳ್ಳಿ, ಸುಬ್ರಾಯ ಈರಾ ನಾಯ್ಕ ದೀಗೊಪ್ಪ ಮತ್ತಿತರರು ಹಲವು ಸಲಹೆ ಸೂಚನೆಗಳನ್ನು ನೀಡಿದರು.


    ಹಿರಿಯ ಸದಸ್ಯರಿಗೆ ಸಮ್ಮಾನ: ಸಂಘದಲ್ಲಿ ಪ್ರಾಮಾಣಿಕವಾಗಿ ವ್ಯವಹರಿಸುತ್ತಿರುವ ಐವರು ಹಿರಿಯ ಸದಸ್ಯರಾದ ದತ್ತಾತ್ರೇಯ ಉಮಾಪತಿ ಭಟ್ ಕರಸುಳ್ಳಿ, ಗಣಪತಿ ಪರಮೈ ಹೆಗಡೆ ತುಂಬೆಮನೆ, ಮಧುಕೇಶ್ವರ ಗಣಪತಿ ಹೆಗಡೆ ಕಲಕೈ, ನಾರಾಯಣ ಈರ ಗೌಡ ಶಿರಸಿಮಕ್ಕಿ, ಮಹಾಲಕ್ಷ್ಮೀ ವೆಂಕಟ್ರಮಣ ಹೆಗಡೆ ಆಲ್ಮನೆ ಇವರುಗಳನ್ನು ಸಂಘದ ನಿಷ್ಠಾವಂತ ಸದಸ್ಯ’ಎಂದು ಸನ್ಮಾನ ಪತ್ರ, ಶಾಲು, ಫಲ-ತಾಂಬೂಲದೊಂದಿಗೆ ಸಮ್ಮಾನಿಸಿ ಗೌರವಿಸಲಾಯಿತು. ನಿವೃತ್ತರಾದ ಸಂಘದ ಸಿಬ್ಬಂದಿ ಕೆ ಎಲ್ ಭಟ್ ದಂಪತಿಯನ್ನು ಸಮ್ಮಾನಿಸಿ ಬಿಳ್ಕೊಡಲಾಯಿತು.

    300x250 AD


    ಆರಂಭದಲ್ಲಿ ಸಂಘದ ಉಪಾಧ್ಯಕ್ಷ ಶ್ರೀಪತಿ ಚಿದಂಬರ ಭಟ್ ಬೂದಿಮುರುಡು ಸ್ವಾಗತಿಸಿದರು. ಆರ್ಥಿಕ ವರ್ಷದಲ್ಲಿ ನಿಧನರಾದ ಸಂಘದಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ನಾರಾಯಣ ವೆಂಕಟ್ರಮಣ ಹೆಗಡೆ ಕಡಬಾಳ, ಹಾಗೂ ಸಂಘದ ಸದಸ್ಯರಿಗೆ ಒಂದು ನಿಮಿಷ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

    ಆಡಳಿತ ಮಂಡಳಿ ಸದಸ್ಯ ರಾಜಶೇಖರ ಕಮಲಾಕರ ಭಟ್ ಬೆಟ್ಟಕೊಪ್ಪ ವಾರ್ಷಿಕ ವರದಿ ಮಂಡಿಸಿದರು.ಮುಖ್ಯ ಕಾರ್ಯನಿರ್ವಾಹಕ ಮುರಳೀಧರ ಸೀತಾರಾಮ ಹೆಗಡೆ ಕಲಕೈ ಕಾರ್ಯಕ್ರಮ ನಿರ್ವಹಿಸಿ,ಹಿಂದಿನ ವರ್ಷದ ವಾರ್ಷಿಕ ಸಭೆಯ ಠರಾವುಗಳನ್ನು ಓದಿದರು. ಆಡಳಿತ ಮಂಡಳಿ ಸದಸ್ಯರಾದ ಅನಂತ ಭಟ್ ಕರಸುಳ್ಳಿ,ಗಣಪತಿ ಸುಬ್ರಾಯ ಹೆಗಡೆ ಕಾನಗೋಡ,ದೇವರು ರಾಮ ಭಟ್ ಕರಸುಳ್ಳಿ, ಮಂಜುನಾಥ ಚಂದ್ರಶೇಖರ ಹೆಗಡೆ ಕಬ್ನಳ್ಳಿ, ಶ್ರೀಮತಿ ಗಣಪತಿ ಹೆಗಡೆ ಶಿರಸಿಮಕ್ಕಿ, ವಿಜಯಾ ಶ್ರೀಧರ ಹೆಗಡೆ ಸಣ್ಣಕೇರಿ, ನಾರಾಯಣ ತಿಮ್ಮ ಮಡಿವಾಳ ಗೋಪುರ, ಪರಮೇಶ್ವರ ಗೋವಿಂದ ನಾಯ್ಕ ಹೊಳೆಕೈ, ರಂಗನಾಥ ಹನುಮಂತ ಮಡಗಾಂವಕರ್ ಕಲ್ಕುಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top