• Slide
    Slide
    Slide
    previous arrow
    next arrow
  • ಪರಿಷತ್ ಚುನಾವಣೆಯಲ್ಲಿ ಭೀಮಣ್ಣರ ಗೆಲುವು ಖಚಿತ; ರಾಜು ಉಗ್ರಾಣಕರ್

    300x250 AD

    ಶಿರಸಿ: ವಿಧಾನಪರಿಷತ್ ಚುನಾವಣೆಯಲ್ಲಿ ಭೀಮಣ್ಣ ನಾಯ್ಕ ಅವರ ಗೆಲುವು ನಿಶ್ಚಿತ. ಕಾಂಗ್ರೆಸ್ ಪಕ್ಷ ಬಲವರ್ಧನೆಗೆ ಅವರು ಕಳೆದ 13 ವರ್ಷಗಳಿಂದ ಕೆಲಸ ಮಾಡಿದ್ದಾರೆ ಎಂದು ಕೆಪಿಸಿಸಿ ಮೀನುಗಾರಿಕಾ ವಿಭಾಗದರಾಜ್ಯ ಕಾರ್ಯದರ್ಶಿ ರಾಜು ಉಗ್ರಾಣಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


    ಈ ಕುರಿತು ಪ್ರತಿಕಾ ಹೇಳಿಕೆ ನೀಡಿರುವ ಅವರು, ಭೀಮಣ್ಣನವರು ಪಕ್ಷ ಸಂಘಟನೆಗೆಂದು ಇಡೀ ಜಿಲ್ಲೆಯಲ್ಲಿ ಓಡಾಡಿದ್ದಾರೆ. ಅವರ ಸರಳ, ಸಜ್ಜನಿಕೆ ವ್ಯಕ್ತಿತ್ವದ ಪರಿಚಯ ಎಲ್ಲರಿಗೂ ತಿಳಿದಿದೆ. ಪಕ್ಷದ ತಳ ಮಟ್ಟದ ಪ್ರತಿಕಾರ್ಯಕರ್ತಕೂಡ ನಿರ್ಭಿಡೆಯಿಂದ ಭೀಮಣ್ಣ ಅವರೊಂದಿಗೆ ಮಾತಾಡಬಲ್ಲ. ಜಿಲ್ಲೆಯಲ್ಲಿ ಪ್ರತಿ ಪಂಚಾಯತ ಸದಸ್ಯರಿಗೂಚಿರ ಪರಿಚಿತ. ಎದುರಾಳಿ ಬಿಜೆಪಿಯಗಣಪತಿ ಉಳ್ವೇಕರ್ ಕೇವಲ ಕಾರವಾರಕ್ಕೆ ಮಾತ್ರ ಸೀಮಿತ ಆಗಿದ್ದಾರೆ ಎಂದರು.

    300x250 AD


    ಗ್ರಾಮ ಪಂಚಾಯತದಲ್ಲಿನ ಅತಿ ಹೆಚ್ಚಿನ ಸದಸ್ಯರು, ಮಧ್ಯಮ ಮತ್ತು ಕೆಳ ವರ್ಗದವರಾಗಿ ಇರುವದರಿಂದ ಬೆಲೆ ಏರಿಕೆಯ ಬಿಸಿ ತಟ್ಟಿ ಸತ್ಯದ ಅರಿವಾಗಿದೆ. ಈ ಎಲ್ಲಕಾರಣದಿಂದ ಭೀಮಣ್ಣ ನಾಯ್ಕ ಈ ಭಾರಿಜನ ಮನ್ನಣೆಯೊಂದಿಗೆ ವಿಧಾನ ಪರಿಷತ್ ಸದಸ್ಯರಾಗಿ ಚುನಾಯಿತರಾಗಿ ಬರುವುದರಲ್ಲಿ ಸಂಶಯವಿಲ್ಲ. ಈ ನಿಟ್ಟಿನಲ್ಲಿ ಜಿಲ್ಲೆಯ ಕಾಂಗ್ರೆಸ್ ಹಿರಿಯ ನಾಯಕಆರ್.ವಿ.ದೇಶಪಾಂಡೆ ಅವರ ನಿರ್ದೇಶನದಂತೆ ಬಿ ಕೆ ಹರಿಪ್ರಸಾದ್, ಮಧು ಬಂಗಾರಪ್ಪ ಮತ್ತು ಜಿಲ್ಲೆಯ ಎಲ್ಲಾ ಹಿರಿ ಕಿರಿಯ ನಾಯಕರ ಒಮ್ಮತದ ಪ್ರಯತ್ನದಿಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top