ಶಿರಸಿ: ಇಲ್ಲಿನ ಗಾಂಧಿನಗರದಲ್ಲಿರುವ ಸಮಾಜದ ಸಮುದಾಯ ಭವನದಲ್ಲಿ ತಾಲೂಕಾ ಭಂಡಾರಿ ಸಮಾಜ ಅಭಿವೃದ್ಧಿ ಸಂಘದ ವತಿಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ವೃತ ನಡೆಯಿತು.
ಶ್ರೀ ಮಾರಿಕಾಂಬಾ ಸಮೂಹ ದೇವಾಲಯದ ಅರ್ಚಕ ವೇ. ಕಿರಣ ಭಟ್ಟ ನೇತೃತ್ವವಹಿಸಿದ್ದರು. ಮಾತೆಯರಿಂದ ಅರಿಶಿಣ ಕುಂಕುಮ ನಡೆಯಿತು. ಸಂಘದ ಅಧ್ಯಕ್ಷ ನಾಗರಾಜ ನಾಯಕ, ಕಾರ್ಯದರ್ಶಿ ಚಂದ್ರಕಾಂತ ನಾಯ್ಕ, ಸದಸ್ಯರಾದ ಜಗದೀಶದೇಶ ಭಂಡಾರಿ, ಪ್ರಕಾಶ ದಿವಿಗಿ, ಜಗನ್ನಾಥ ದೇಶಭಂಡಾರಿ, ಪಾಂಡುರಂಗ ಕೆರೆಕರ್, ದೇವಿದಾಸ ದಿವಗಿ, ವಿನಾಯಕ ಭಂಡಾರಿ, ಲತಾ ಭಂಡಾರಕರ, ಸುನೀತಾ ನಾಯಕ, ಗಂಗಾ ಭಂಡಾರಿ, ಯೋಗಿನಿ ಭಂಡಾರಿ, ಸಂತೋಷ ವಾರೇಕರ ಸಮಾಜದ ಎಲ್ಲ ಸದಸ್ಯರು ಉಪಸ್ಥಿತರಿದ್ದರು.