ಮುಂಡಗೋಡ: ತಾಲೂಕಿನ ಸುಳ್ಳಳ್ಳಿ, ಬಸನಕೊಪ್ಪ, ಕವಲಗಿ, ಕ್ಯಾತನಳ್ಳಿ ಗ್ರಾಮಗಳಿಗೆ ಶೀಘ್ರ ನರ್ಸ್‍ಗಳ ನೇಮಕಕ್ಕೆ ಒತ್ತಾಯಿಸಿ ಗ್ರಾಮಸ್ಥರು ತಾಲೂಕಾ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಪಟ್ಟಣದಿಂದಈ ಗ್ರಾಮಗಳು ಸುಮಾರು 20-25 ಕಿಲೋ ಮೀಟರ್‍ದೂರವಿದ್ದು ಸಾರ್ವಜನಿಕರಿಗೆತೊಂದರೆಆದರೆಇಲ್ಲಿಆಸ್ಪತ್ರೆಯಿಲ್ಲ. ನರ್ಸ್‍ಗಳಿಲ್ಲ. ಹಾಗಾಗಿ ಜನರುಅನಾರೋಗ್ಯದಿಂದತೊಂದರೆ ಅನುಭವಿಸಿ, ಸಾವಿಗೀಡಾದ ಪ್ರಕರಣಗಳು ಸಾಕಷ್ಟು ನಡೆದಿವೆ. ಆದ್ದರಿಂದ ಎಲ್ಲ ಗ್ರಾಮಕ್ಕೆ ಸಾರ್ವಜನಿಕರ ಆರೋಗ್ಯವನ್ನು ವಿಚಾರಿಸಿ,ಚಿಕಿತ್ಸೆ ಮಾರ್ಗದರ್ಶನ ಹಾಗೂ ಸಲಹೆ ಸೂಚನೆಗಳನ್ನು ನೀಡಲು, ಬಾಣಂತಿ ಮಕ್ಕಳ ಆರೋಗ್ಯದ ಸುಧಾರಣೆಗಮನಹರಿಸುವ ವಿಷಯಕ್ಕಾಗಿ ನರ್ಸ್‍ಗಳ ನೇಮಕ ಮಾಡುವಂತೆ ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಬೋಮಣ್ಣ ಹುಡೇಲಕೊಪ್ಪ, ಬೀಮ ಅಮ್ಮಿನಭಾವಿ, ರತ್ನಾ ಮಾದರ, ಮಾಜನು ಮಟ್ಟಿಗೇರಿ, ಮಾಬುಲಿ, ಸುಳ್ಳ, ಶಮಶಾದ್,ಮಾಬುಬಸಾಬ್, ದ್ಯಾಮಣ್ಣಕೊಲಕರ, ಲೋಕಪ್ಪಅಮ್ಮಿನಬಾವಿ, ಚಂದ್ರಕಾಂತ ಹುಡೇಲಕೊಪ್ಪ, ರಾಧಾ ಬೇಟಗೇರಿ, ಶಿವಪ್ಪ ಸಣ್ಣಳ್ಳಿಮನಿ, ಬಸಪ್ಪ ರಾಯಳ್ಳಿ, ಲಕ್ಷ್ಮೀ ಮಿರಾಶಿ, ಮಂಜುನಾಥ ಕ್ಯಾತನಳ್ಳಿ, ಪಥಾಕೋಲಕರ ಪರಮೇಶ್ವರ ಸೇರಿದಂತೆಇನ್ನಿತರರು ಉಪಸ್ಥಿತರಿದ್ದರು.