ಕಾರವಾರ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 2020-21ನೇ ಸಾಲಿನ ಶುಲ್ಕ ವಿನಾಯಿತಿ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ನ.30 ರೊಳಗಾಗಿ ಬ್ಯಾಂಕ್‍ಖಾತೆಗೆ ಆಧಾರ್‍ಜೋಡಣೆ ಮಾಡಿಕೊಳ್ಳದಿದ್ದಲ್ಲಿ ಶುಲ್ಕ ವಿನಾಯಿತಿ ಮೊತ್ತವುರದ್ದಾಗಲಿದೆ.
ಕೆಲವು ವಿದ್ಯಾರ್ಥಿಗಳ ಬ್ಯಾಂಕ್‍ಖಾತೆಯು ಆಧಾರ ಸಂಖ್ಯೆಗೆ ಜೋಡಣೆಯಾಗದ ಕಾರಣ ಶುಲ್ಕ ವಿನಾಯಿತಿ ಮೊತ್ತವು ಮಂಜೂರಾಗಿದ್ದರೂ ಸಹ ವಿದ್ಯಾರ್ಥಿಗಳ ಖಾತೆಗೆ ಹಣ ಜಮೆಯಾಗಿಲ್ಲ ಹಾಗೂ ಕೆಲವು ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ಮಂಜೂರು ಮಾಡಲು ಸಾಧ್ಯವಾಗುತ್ತಿಲ್ಲ. ಇಂತಹ ವಿದ್ಯಾರ್ಥಿಗಳು ತಮ್ಮ ಬ್ಯಾಂಕ್ ನಂಬರ್‍ಗೆಆಧಾರ ಸಂಖ್ಯೆಯನ್ನು ಜೋಡಣೆ ಮಾಡಿಸಿ ಎನ್‍ಪಿಸಿಐ ಮ್ಯಾಪಿಂಗ್ ಮಾಡಿಸಲು ಸೂಚಿಸಲಾಗಿದೆ.
ಆಧಾರ ಸಂಖ್ಯೆಯಲ್ಲಿಇರುವ ವಿದ್ಯಾರ್ಥಿಗಳ ಹೆಸರು, ಎಸ್.ಎಸ್.ಎಲ್.ಸಿ ಅಂಕಪಟ್ಟಿಯಲ್ಲಿರುವ ಹೆಸರು ತಾಳೆ ಆಗದೇ ಇರುವುದರಿಂದ ಈ ವಿದ್ಯಾರ್ಥಿಗಳಿಗೂ ಸಹ ಶುಲ್ಕ ವಿನಾಯಿತಿ ಮೊತ್ತವು ವಿದ್ಯಾರ್ಥಿಗಳ ಬ್ಯಾಂಕ್‍ಖಾತೆಗೆಜಮಾಆಗಿರುವುದಿಲ್ಲ. ಈ ವಿದ್ಯಾರ್ಥಿಗಳೂ ಸಹ ಎಸ್.ಎಸ್.ಎಲ್.ಸಿ. ಅಂಕಪಟ್ಟಿಯಲ್ಲಿರುವ ಹೆಸರಿನಂತೆ ಆಧಾರಕಾರ್ಡಿನಲ್ಲಿತಿದ್ದುಪಡಿ ಮಾಡಲು ಸೂಚಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ದೂರವಾಣಿ ಸಂಖ್ಯೆ 08382-226589 ಅಥವಾತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿಯನ್ನು ಸಂಪರ್ಕಿಸಬಹುದಾಗಿದೆಎಂದು ಹಿಂದುಳಿದ ವರ್ಗಗಳ ಕಲ್ಯಾಣಇಲಾಖೆಯಜಿಲ್ಲಾಅಧಿಕಾರಿವಿರೇಂದ್ರಎನ್. ಬಾಡಕರ ತಿಳಿಸಿದ್ದಾರೆ.