ಕಾರವಾರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಾಜ್ಯ ಸಂಪನ್ಮೂಲ ಕೇಂದ್ರಯೋಜನೆಯಲ್ಲಿ ನಡೆಯುತ್ತಿರುವ ಮಹಿಳಾ ಸ್ವ-ಉದ್ಯೋಗ ಮಾರ್ಗದರ್ಶನ ಕೇಂದ್ರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಲು ಆಸಕ್ತ ಮಹಿಳಾ ಅಭ್ಯರ್ಥಿನಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಮಾರ್ಗದರ್ಶನ ಕೇಂದ್ರದಲ್ಲಿ ಕಾರ್ಯನಿರ್ವಹಿಸಲು ಸಂಪನ್ಮೂಲ ವ್ಯಕ್ತಿಯನ್ನು 3 ತಿಂಗಳ ಅವಧಿ ಹಾಗೂ ಗೌರವಧನದ ಆಧಾರದ ಮೇಲೆ ನೇಮಿಸಿಕೊಳ್ಳಲಾಗುತ್ತಿದ್ದು, ಅಭ್ಯರ್ಥಿಯು ಅರ್ಜಿದಾರರುಎಂ.ಎಸ್.ಡಬ್ಲ್ಯೂ ಅಥವಾ ಎಂ.ಎ ಮಹಿಳಾ ಅಧ್ಯಯನ ಅಥವಾ ಸೋಶಿಯಾಲಜಿ ಇವುಗಳಲ್ಲಿ ಯಾವುದಾದರು ಒಂದರಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು, ಅಭ್ಯರ್ಥಿಯು ಮಹಿಳಾ ಅಭಿವೃದ್ಧಿ ಕ್ಷೇತ್ರದಲ್ಲಿ ಕನಿಷ್ಠ 3 ರಿಂದ 5 ವರ್ಷಗಳ ಅನುಭವ ಹೊಂದಿರಬೇಕು.
ಅಭ್ಯರ್ಥಿಯು ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಪ್ರವಾಸ ಕೈಗೊಳ್ಳಲು ದೈಹಿಕವಾಗಿ ಸಾಮರ್ಥ್ಯ ಹೊಂದಿರಬೇಕು. ವಯೋಮಿತಿ 21 ರಿಂದ 50 ವರ್ಷದೊಳಗಿರಬೇಕು ಆಸಕ್ತಿಯುಳ್ಳ ಮಹಿಳಾ ಅಭ್ಯರ್ಥಿಗಳು ತಮ್ಮ ಸ್ವ-ವಿವರ (ಬಯೋಡಾಟಾ), ಒಪ್ಪಿಗೆ ಪತ್ರ ಹಾಗೂ ಸೂಕ್ತ ದಾಖಲೆ ಪತ್ರಗಳೊಂದಿಗೆ ಅರ್ಜಿಯನ್ನು ನ. 30 ರೊಳಗಾಗಿ ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಿಮಾಂಡ್‍ರೂಮ್ ಕಂಪೌಂಡ್, ಡಾ. ಕಮಲಾಕರ ರೋಡ್‍ಕಾರವಾರ ಕಚೇರಿಗೆ ಸಲ್ಲಿಸಹಬುದೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಶ್ಯಾಮಲಾಸಿ.ಕೆ ತಿಳಿಸಿದ್ದಾರೆ.