ಕಾರವಾರ: ಕನಕದಾಸರು ಜಾತಿ ವ್ಯವಸ್ಥೆ ಬಗ್ಗೆ ತಮ್ಮ ಕೀರ್ತನೆಗಳ ಮೂಲಕ ಜನತೆಗೆ ಎಚ್ಚರಿಕೆ ನೀಡಿ ಸಮಾಜವನ್ನು ತಿದ್ದುವ ಕೆಲಸ ಮಾಡಿದ್ದಾರೆ ಎಂದು ಸರಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಪ್ರಾಂಶುಪಾಲೆ ವಿಜಯಾ ಡಿ. ನಾಯ್ಕ ಅಭಿಪ್ರಾಯಪಟ್ಟರು.
ಸರಕಾರಿ ಕಾಲೇಜಿನಲಿ ್ಲಕನಕಜಯಂತಿ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಕಾಗಿನೆಲೆಯಿಂದ ಉಡುಪಿವರೆಗಿನ ತಿಮ್ಮಪ್ಪ ನಾಯ್ಕರ ಪಯಣ ಅವರನ್ನು ಕನಸದಾಸರನ್ನಾಗಿ ಪರಿವರ್ತಿಸಿತು. ಯುದ್ಧದಲ್ಲಿ ಸೋತ ತಿಮ್ಮಪ್ಪ ನಾಯಕ, ಕೊಪ್ಪರಿಕೆ ಹೊನ್ನು ಸಿಕ್ಕ ನಂತರ ಮನ ಪರಿವರ್ತನೆಯಾಗಿ ಕನಕದಾಸರಾದರು ಎಂದರು.
ಕನಕದಾಸರಜೀವನ ಮತ್ತು ಸಾಹಿತ್ಯದಕುರಿತು ಬಿಎ ದ್ವಿತೀಯ ವಿಭಾಗದ ವಿದ್ಯಾರ್ಥಿನಿ ನಂದಿನಿ ಶೆಟ್ಟಿ ಮಾತನಾಡಿ, ಕನಕದಾಸರು ನಮ್ಮ ವಿವೇಚನೆ ವಿಸ್ತಾರಗೊಳಿಸಿದ ಜನ ಕವಿ ಎಂದರು. ವಿದ್ಯಾರ್ಥಿನಿಯರಾದ ನಿವೇದಿತ, ದೀಪಾಲಿ ಕನಕದಾಸರ ಕೀರ್ತನೆಗಳನ್ನು ಸುಶ್ರಾವ್ಯವಾಗಿ ಹಾಡಿದರು. ವೇದಿಕೆಯಲ್ಲಿಕಾಲೇಜಿನ ಹಿರಿಯಉಪನ್ಯಾಸಕಿ ವಿದ್ಯಾ ನಾಯಕ, ಡಾ. ಪ್ರಗಾಸಂ, ಡಾ.ಗೀತಾ ತಳವಾರ ಹಾಗೂ ಕಛೇರಿಅಧೀಕ್ಷಕ ಸಂತೋಷಕಾಣಕೋಣಕರ ಹಾಜರಿದ್ದರು. ಕಾರ್ಯಕ್ರಮದಲ್ಲಿಎಲ್ಲಉಪನ್ಯಾಸಕರು ಹಾಗೂ ಬೋಧಕೇತರವೃಂದದವರು,ವಿದ್ಯಾರ್ಥಿಗಳು ಭಾಗವಹಿಸಿದ್ದರು.