• Slide
  Slide
  Slide
  previous arrow
  next arrow
 • ಪ್ರಾಮಾಣಿಕತೆಗೆ ಮತ್ತೊಂದು ಹೆಸರೇ ಆಟೋ ಚಾಲಕರು; ಉಮೇಶ ನಾಯ್ಕ

  300x250 AD


  ಅಂಕೋಲಾ: ಪ್ರಾಮಾಣಿಕತೆಗೆ ಮತ್ತೊಂದು ಹೆಸರೇ ಆಟೋ ಚಾಲಕರು. ಅವರು ಯಾವುದೇ ಸಂದರ್ಭದಲ್ಲೂ ಕೂಡಾ ಜನಸೇವೆಗೆ ಸದಾ ಸಿದ್ದರಾಗಿರುತ್ತಾರೆ ಎಂದು ನ್ಯಾಯವಾದಿ ಉಮೇಶ ನಾಯ್ಕ ಹೇಳಿದರು.


  ಅವರು ಪಟ್ಟಣದ ಪಟ್ಟಣದ ಜೈಹಿಂದ್ ಲಾಡ್ಜ್ ಬಳಿಯ ಜೈ ಮಾತಾ ಆಟೋ ಸ್ಟ್ಯಾಂಡ್‍ನ ನಾಮಫಲಕ ಉದ್ಘಾಟಿಸಿ ಮಾತನಾಡಿದರು.
  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತ ಸುಭಾಷ್ ಕಾರೇಬೈಲ್, ರಿಕ್ಷಾಚಾಲಕರು ಪ್ರಾಮಾಣಿಕ ಕೆಲಸದ ಜೊತೆಗೆ ಇಡೀಕುಟುಂಬದ ನಿರ್ವಹಣೆ ಮಾಡಬೇಕಾಗುತ್ತದೆ. ಕೋವಿಡ್ ಸಂದರ್ಭದಲ್ಲಿಜನರಿಗೆ ಅಗತ್ಯ ಸೇವೆ ನೀಡಿದ್ದಾರೆ. ಅಶಕ್ತರಿಗೆ, ಅನಾರೋಗ್ಯ ಪೀಡಿತರಿಗೆತುರ್ತು ನೆರವಾಗುವ ಇವರ ಕಾರ್ಯ ಶ್ಲಾಘನೀಯ ಎಂದರು.

  300x250 AD


  ಆಟೋಚಾಲಕರ ವತಿಯಿಂದ ಉಮೇಶ ನಾಯ್ಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಘು ಕಾಕರಮಠ, ಮಾರುತಿ ಹರಿಕಂತ್ರ ಉಪಸ್ಥಿತರಿದ್ದು, ಮಾತನಾಡಿದರು. ಪತ್ರಕರ್ತ ನಾಗರಾಜ ಜಾಂಬಳೇಕರ ಕಾರ್ಯಕ್ರಮ ನಿರ್ವಹಿಸಿದರು. ಜೈ ಮಾತಾಆಟೋಚಾಲಕರ ಸಂಘದಅಧ್ಯಕ್ಷ ವಿನಾಯಕ ನಾಯ್ಕ, ಉಪಾಧ್ಯಕ್ಷರಾಮುಅಂಕೋಲೆಕರ, ಕಾರ್ಯದರ್ಶಿ ನಾಗರಾಜ ನಾಯಕ, ಉಮೇಶ ನಾಯ್ಕ, ನಾಗರಾಜ ಶೆಟ್ಟಿ ಹಾಗೂ ಸದಸ್ಯರು ಹಾಜರಿದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top