• Slide
    Slide
    Slide
    previous arrow
    next arrow
  • ನ.28ಕ್ಕೆ ಹಿಲ್ಲೂರು ಯಕ್ಷಮಿತ್ರ ಬಳಗ ಉದ್ಘಾಟನೆ; ವೀರಮಣಿ ಕಾಳಗ ಯಕ್ಷಗಾನ ಪ್ರಸಂಗ

    300x250 AD

    ಶಿರಸಿ: ಇಲ್ಲಿಯ ಟಿ.ಎಂ.ಎಸ್ ಸಭಾಭವನದಲ್ಲಿ ನ.28 ರವಿವಾರ ಮಧ್ಯಾಹ್ನ 4 ಘಂಟೆಯಿಂದ ನೂತನವಾಗಿ ಅಸ್ಥಿತ್ವಕ್ಕೆ ಬರುತ್ತಿರುವ ಹಿಲ್ಲೂರು ಯಕ್ಷಮಿತ್ರ ಬಳಗ ಶಿರಸಿ ಇದರ ಉದ್ಘಾಟನಾ ಕಾರ್ಯಕ್ರಮ ಹಾಗೂ ಸಭೆಯ ನಂತರ ವೀರಮಣಿ ಕಾಳಗ ಎಂಬ ಯಕ್ಷಗಾನ ಪ್ರಸಂಗ ಪ್ರದರ್ಶನಗೊಳ್ಳಲಿದೆ.

    ಹಿಲ್ಲೂರು ಯಕ್ಷಮಿತ್ರ ಬಳಗವನ್ನು ಹಿರಿಯ ಯಕ್ಷಗಾನ ಕಲಾವಿದ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕೃಷ್ಣಯಾಜಿ ಬಳ್ಕೂರ್ ರವರು ಉದ್ಘಾಟಿಸಲಿದ್ದು ಅಧ್ಯಕ್ಷತೆಯನ್ನು ಟಿ,ಎಂ.ಎಸ್‍ಅಧ್ಯಕ್ಷ ಜಿ.ಎಂ.ಹೆಗಡೆ ಹುಳಗೋಳ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಿರಸಿ ಕೆಡಿಸಿಸಿ ಬ್ಯಾಂಕ್ ಹಾಗೂ ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನಮನೆ, ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷ ಉಪೇಂದ್ರ ಪೈ, ಉದ್ಯಮಿ ಆರ್.ಜಿ. ಭಟ್ಟ ವರ್ಗಾಸರ ಹುಬ್ಬಳ್ಳಿ, ಯಲ್ಲಾಪುರ ಟಿ.ಎಂ.ಎಸ್. ಅಧ್ಯಕ್ಷ ನರಸಿಂಹ ಕೋಣೆಮನೆ ಹಾಗೂ ಹಿರಿಯ ಯಕ್ಷಗಾನ ಭಾಗವತ ಸುರೇಶ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ.

    300x250 AD


    ತದನಂತರದಲ್ಲಿ ಯಕ್ಷಗಾನ ವೀರಮಣಿ ಕಾಳಗ ಪ್ರದರ್ಶನಗೊಳ್ಳಲಿದ್ದು ಹಿಮ್ಮೇಳದಲ್ಲಿ ಭಾಗವತರಾಗಿ ಶಂಕರನಾರಯಣ ಸುರೇಶ ಶೆಟ್ಟಿ, ಹಿಲ್ಲೂರು ರಾಮಕೃಷ್ಣ ಹೆಗಡೆ, ಮದ್ದಲೆ ವಾದನಕರ್ಕಿ ಪರಮೇಶ್ವರ ಭಂಡಾರಿ, ಅನಿರುದ್ದ ಹೆಗಡೆ ವರ್ಗಾಸರ ಹಾಗೂ ಚಂಡೆ ಪ್ರಸನ್ನ ಭಟ್ಟ ಹೆಗ್ಗಾರ ಸಹಕರಿಸಲಿದ್ದಾರೆ.


    ಮುಮ್ಮೇಳದ ಪಾತ್ರಧಾರಿಗಳಾಗಿ ಬಳ್ಕೂರು ಕೃಷ್ಣ ಯಾಜಿ, ತೋಟಿಮನೆ ಗಣಪತಿ ಹೆಗಡೆ, ನೀಲ್ಕೋಡು ಶಂಕರ ಹೆಗಡೆ, ಮಂದಾರ್ತಿ ಪ್ರಸನ್ನ ಶೆಟ್ಟಗಾರ್, ಹಾರೇಕೊಪ್ಪ ಮಹಾಬಲೇಶ್ವರ ಗೌಡ, ಗುಣವಂತೆರಾಜೇಶ ಭಂಡಾರಿ ಮತ್ತುಚಂದ್ರಹಾಸ ಗೌಡ ರವರುಗಳು ಭಾಗವಹಿಸಲಿದ್ದಾರೆ ಎಂದು ಹಿಲ್ಲೂರು ಯಕ್ಷಮಿತ್ರ ಬಳಗದ ಅಧ್ಯಕ್ಷ ರಾಮಕೃಷ್ಣ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶ್ರೀಪ್ರಭಾ ಸ್ಟುಡಿಯೋದ ಯುಟ್ಯೂಬ್ ಚಾನೇಲ್ನಲ್ಲಿ ಕಾರ್ಯಕ್ರಮದ ನೇರಪ್ರಸಾರಗೊಳ್ಳಲಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top