ಕುಮಟಾ: ವಿಧಾತ್ರಿ ಅಕಾಡೆಮಿಯ ಸಹಯೋಗದ, ಕೊಂಕಣ ಏಜುಕೇಷನ್ ಟ್ರಸ್ಟ್’ನ ಪ್ರತಿಭಾ ಪುರಸ್ಕಾರದಲ್ಲಿ ಸರಸ್ವತಿ ಪ. ಪೂ. ಕಾಲೇಜಿನ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಪ್ರಸಕ್ತ ಶೈಕ್ಷಣಿಕ ಸಾಲಿನ JEE ಹಾಗೂ KCET ಯಲ್ಲಿ ಟಾಪರ್ ಆಗಿರುವ ಪೂರ್ಣಿಮಾ ಪಟಗಾರ, KCET ಯಲ್ಲಿ ಟಾಪರ್ ಅನನ್ಯಾ ಎನ್. NEET ಟಾಪರ್ ಕು. ತೇಜೇಶ್ವನಿ ಶಾನಭಾಗ ಮತ್ತು ಇತರ ಟಾಪರ್ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿ ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ವಿಶ್ವಸ್ಥ ಮಂಡಳಿ ಸದಸ್ಯರು ಹಾಗೂ ಪ್ರಾಚಾರ್ಯ ಎಂ. ಎಸ್. ಉಪ್ಪಿನ ಮತ್ತು ವಿಧಾತ್ರಿ ಅಕಾಡೆಮಿಯ ಸಂಸ್ಥಾಪಕ ಗುರುರಾಜ ಶೆಟ್ಟಿ ಯವರು ಹಾಗೂ ಎಲ್ಲ ಬೋಧಕ-ಬೋಧಕೇತರ ಸಿಬ್ಬಂದಿಯವರು ಸನ್ಮಾನದಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.