• Slide
  Slide
  Slide
  previous arrow
  next arrow
 • ಹುದ್ದೆಗೆ ತಕ್ಕ ನ್ಯಾಯದ ಜೊತೆ ಛಾಪು ಒದಗಿಸುವುದು ಮುಖ್ಯ; ಸಚಿವ ಅರಗ ಜ್ಞಾನೇಂದ್ರ

  300x250 AD

  ಸಿದ್ದಾಪುರ: ಹುದ್ದೆ ಮುಖ್ಯ ಅಲ್ಲ. ಹುದ್ದೆಗೆ ನ್ಯಾಯ ಒದಗಿಸುವುದರ ಜತೆಗೆ ಛಾಪು ಮೂಡಿಸುವುದು ಮುಖ್ಯ. ಇದಕ್ಕೆ ಜ್ಞಾನ ಬೇಕು. ಜ್ಞಾನ ಇಲ್ಲದಿದ್ದರೆ ಏನನ್ನೂ ಸಾಧಿಸಲು ಸಾಧ್ಯ ಇಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು.

  ತಾಲೂಕಿನ ಇಟಗಿ ಸಮೀಪದ ಕಲಗದ್ದೆಯ ಯಕ್ಷಗಾನ ನಾಟ್ಯ ವಿನಾಯಕ ಹಾಗೂ ಲಲಿತಾ ರಾಜರಾಜೇಶ್ವರಿ ದೇವಾಲಯದಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ರಾಜ ಮಾನ್ಯ ಪ್ರಶಸ್ತಿ ಪ್ರದಾನ ಮಾಡಿ ಅವರು ಮಂಗಳವಾರ ಮಾತನಾಡಿದರು.
  ವಿಧಾನಸಭಾಧ್ಯಕ್ಷ ಸ್ಥಾನ ಎನ್ನುವುದು ಸಂವಿಧಾನದ ದೊಡ್ಡ ಹುದ್ದೆ ಆಗಿದ್ದು ಇದನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುತ್ತಿರುವ ಕಾಗೇರಿ ಅವರು ಬೇರೆಯವರಿಗೆ ಮಾದರಿ ಆಗಿದ್ದಾರೆ. ವಿಧಾನಸಭಾಧ್ಯಕ್ಷ ಹುದ್ದೆ ನಡೆಸುವುದು ಕಷ್ಠ. ಯೋಗ್ಯತೆ ಬೇಕು. ಅಂತಹ ಯೋಗ್ಯತೆ ಕಾಗೇರಿಯವರಲ್ಲಿದೆ. ಕಾಗೇರಿ ಅವರು ಸಂವಿಧಾನದ ಎಲ್ಲ ಆಶಯಗಳನ್ನು ಪಾಲಿಸುತ್ತ ಸಂವಿಧಾನದ ಕುರಿತು ತಿಳುವಳಿಕೆ ನೀಡಿರುವುದು ಎಲ್ಲ ಶಾಸಕರಿಗೂ ಅನುಕೂಲವಾಗಿದೆ.

  1994ರಿಂದ ನಾವಿಬ್ಬರೂ ಒಂದೇ ಬೇಂಚಿನಲ್ಲಿ ಕುಳಿತಿದ್ದೇವೆ. ನಾವೀಬ್ಬರೂ ಲವ-ಕುಶರಂತೆ ಇದ್ದೇವೆ. ಅವರಿಂದ ನಾನು ಬಹಳಷ್ಟು ಕಲಿತಿದ್ದೇನೆ. ನಾವೀಬ್ಬರೂ ಯಾವುದೇ ಪ್ರಚಾರಕ್ಕಾಗಿ ಯಾವುದೇ ಕೆಲಸಮಾಡಿಲ್ಲ. ನಾಡಿದೆ ದೊರೆಯಾದರೂ ತಾಯಿಗೆ ಮಕ್ಕಳೆ ಆಗಿದ್ದೇವೆ ಎಂದು ಮಾರ್ಮಿಕವಾಗಿ ಹೇಳಿದರು. ನಾವೀಬ್ಬರೂ ಸಂಘಟನೆಯಿಂದ ಮೇಲಕ್ಕೆ ಬಂದವರೂ ನಾವೀಬ್ಬರೂ ಅಧಿಕಾರಕ್ಕಾಗಿ ಯಾವತ್ತೂ ಕಾದು ಕುಳಿತಿಲ್ಲ. ಅಧಿಕಾರ ಇಲ್ಲ ಎಂದು ಪಕ್ಷ ಬಿಡುವವರು ನಾವಲ್ಲ ಎಂದು ಹೇಳಿದರು.

  ರಾಜ ಮಾನ್ಯ ಪ್ರಶಸ್ತಿ ಸ್ವೀಕರಿಸಿ ಮಾತನಡಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಯಾವುದೇ ಒಳ್ಳೆಯ ಕೆಲಸ ಮಾಡುವಾಗ ದೈವಿ ನಶಕ್ತಿ ಬೇಕು. ಜನರಿಗೆ ಒಳ್ಳೆಯ ಕೆಲಸ ಮಾಡುವ ಅಭಿರುಷಿ ಹೊಂದಿದ್ದೇನೆ. ಧಾರ್ಮಿಕ ಕ್ಷೇತ್ರದಿಂದ ಇಂದು ನಮ್ಮ ಸಂಸ್ಕøತಿ ಉಳಿಯುತ್ತಿದೆ. ಜ್ಞಾನ ಉದ್ಯೋಗ ಹಾಗೂ ಹಣ ಗಳಿಕೆ ಮಾತ್ರ ಅಲ್ಲ. ಸಮಾಜದಲ್ಲಿ ಜಾಗೃತಿ ಮೂಇಒಸುವಂತಿರಬೇಕು ಹಾಗೂ ಸಂಸ್ಕøತಿ ಉಳಿಸುವುದಕ್ಕೂ ಆಗಬೇಕು ಎಂದು ಹೇಳಿದರು.

  300x250 AD


  ವಿದ್ವಾಂಸ ಡಾ.ಜಿ.ಎಲ್.ಹೆಗಡೆ ಕುಮಟಾ ಅಭಿನಂದನಾ ಮಾತನಾಡಿದರು. ವೇ.ಕೃಷ್ಣ ಭಟ್ಟ ಅಡವಿತೋಟ ಉಪಸ್ಥಿತರಿದ್ದರು.
  ವಿನಾಯಕ ಹೆಗಡೆ ಕಲಗದ್ದೆ ಸ್ವಾಗತಿಸಿದರು. ಕೇಶವ ಹೆಗಡೆ ಕೊಳಗಿ ಗಣಪತಿ ಸ್ತುತಿ ಮಾಡಿದರು. ವೆಂಕಟೇಶ ಹೆಗಡೆ ವಂದಿಸಿದರು. ಗಣಪತಿ ಹೆಗಡೆ ಗುಂಜಗೋಡ ನಿರ್ವಹಿಸಿದರು.


  ಕಾರ್ತೀಕ ಅಂಗಾರಕ ಸಂಕಷ್ಟಿ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮ, ದಶದಿಶಾ ದೀಪೆÇೀತ್ಸವ, ಅನ್ನಸಂತರ್ಪಣೆ ನಡೆಯಿತು.

  Share This
  300x250 AD
  300x250 AD
  300x250 AD
  Leaderboard Ad
  Back to top