ಸಿದ್ದಾಪುರ: ತಾಲೂಕಿನ ತ್ಯಾಗಲಿ ಸಮೀಪದ ಸುರಗಿಕೊಪ್ಪದವರಾದ ಮಂಜುನಾಥ ಹೆಗಡೆ, ಭಾರತೀಯ ಸೇನೆಯಲ್ಲಿ ಕರ್ನಲ್ ಹುದ್ದೆಗೆ ಏರಿದ್ದಾರೆ.
1983 ರಲ್ಲಿ ಭಾರತೀಯ ಭೂ ಸೇನೆಗೆ ಸೇರಿದ್ದ ಇವರು, 2001ರಲ್ಲಿ ಕಮಿಷನರ್ ಆಫೀಸರಾಗಿ ಪದೋನ್ನತಿ ಹೊಂದಿದರು. ನಂತರ ಲೆಫ್ಟಿನೆಂಟ್, ಕ್ಯಾಪ್ಟನ್ ಮೇಜರ್ ಲೆಪ್ಟಿನೆಂಟ್ ಕರ್ನಲ್ ಆಗಿ ತಮ್ಮ ದಕ್ಷ ಸೇವೆ ಸಲ್ಲಿಸಿದ್ದಾರೆ.
ಪ್ರಸ್ತುತ ಕರ್ನಲ್ ಹುದ್ದೆಗೆ ಏರಿ 5 ಮಹಾರಾಷ್ಟ್ರ ಎನ್ ಸಿ ಸಿ ಬಟಾಲಿಯನ್ ನಲ್ಲಿ ಕಮಾಂಡಿಂಗ್ ಆಫೀಸರ್ ಆಗಿ ನಿಯುಕ್ತಿಗೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕರ್ನಲ್ ಹುದ್ದೆಗೇರಿದ ಕೆಲವೇ ಕೆಲವು ಜನರಲ್ಲಿ ಇವರೂ ಒಬ್ಬರಾಗಿದ್ದಾರೆ.
ಇವರ ಸೇವೆಯನ್ನು ಪರಿಗಣಿಸಿ ಅಖಿಲಹವ್ಯಕ ಮಹಾ ಸಭಾದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಇವರನ್ನು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಗೌರವಿಸಲಾಗಿದೆ.