ಅಂಕೋಲಾ: ಬಿ.ಕಾಂ 5ನೇ ಹಾಗೂ 6 ನೇ ಸೆಮಿಸ್ಟರ್ ಫಲಿತಾಂಶ ಪ್ರಕಟವಾಗಿದ್ದು, ಕೆನರಾ ವೆಲ್‍ಫೆರ್ ಟ್ರಸ್ಟ್‍ನ ಗೋಖಲೆ ಸೆಂಟನರಿ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಪ್ರತೀಕ ನಾಯಕ ಶೇ. 93.42 ಅಂಕ ಪಡೆದು ಕಾಲೇಜಿಗೆ ಪ್ರಥಮ, ನಿಖಿಲ ಶೆಟ್ಟಿ ಶೇ. 92 ದ್ವಿತೀಯ, ಪ್ರತಿಕ್ಷಾ ನಾಯ್ಕ ಶೇ. 88 ತೃತೀಯ ಸ್ಥಾನ ಪಡೆದಿದ್ದಾರೆ.
ಇವರು ಅಕೌಂಟಿಗ್ ಥೇರಿ ಮತ್ತು ಮ್ಯಾನೇಜ್ಮೆಂಟ್ ಅಕೌಂಟಿಗ್ ವಿಷಯದಲ್ಲಿ ಪ್ರತೀಕ ನಾಯಕ, ಕಾಸ್ಟ್ ಅಕೌಂಟಿಂಗ್ ವಿಷಯದಲ್ಲಿ ವರುಣ ನಾಯಕ, ವೈಭವ ನಾಯಕ ಹಾಗೂ ಬಿಜಿನೆಸ್ ಲಾ ವಿಷಯದಲಿ ಕೀರ್ತಿ ಕಾಮತ, ತೇಜಸ್ ಶೆಟ್ಟಿ, ಆದರ್ಶ ಶೆಟ್ಟಿ ಹಾಗೂ ಸಿಲೊನಿ ಮಿರಾಂಡ ಇವರುಗಳು ನೂರಕ್ಕೆ ನೂರು ಅಂಕಗಳಿಸಿದ್ದಾರೆ.
ವಿದ್ಯಾರ್ಥಿಗಳ ಈ ಅತ್ಯುತ್ತಮ ಸಾಧನೆಗೆ ಟ್ರಸ್ಟಿನ ಅಧ್ಯಕ್ಷ ಎಸ್.ಪಿ.ಕಾಮತ, ಕಾರ್ಯದರ್ಶಿ ಕೆ.ವಿ.ಶೆಟ್ಟಿ, ಪ್ರಾಂಶುಪಾಲ ಡಾ. ಅಶೋಕ ಕುಮಾರ್, ವಾಣಿಜ್ಯ ಶಾಸ್ತ್ರ ವಿಭಾಗದ ಸಂಯೋಜಕ ಕೃಷ್ಣಾನಂದ ಮಹಾಲೆ, ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥೆ ವೇದಾ ಭಟ್ಟ ಹಾಗೂ ಕಾಲೇಜಿನ ಶಿಕ್ಷಕ ಹಾಗೂ ಶಿಕ್ಷೇತರ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.