ಭಟ್ಕಳ: ನಗರದ ನವಾಯತ್ ಕಾಲೋನಿಯ ರಾಬಿತ್ ಸೊಸೈಟಿಯ ಹತ್ತಿರದಲ್ಲಿ ಕುಂದಾಪುರ ಮೂಲದ ವ್ಯಕ್ತಿಯೋರ್ವನ ಶವ ಪತ್ತೆಯಾದ ಘಟನೆ ಸೋಮವಾರ ನಡೆದಿದೆ.
ಮೃತ ಮಂಜುನಾಥಚಂದನ ಮೊಗವೀರ (59 ವರ್ಷ) ಕುಂದಾಪುರ ತಾಲೂಕಿನ ನಾಗೂರು ಕಿರಿಮಂಜೇಶ್ವರ ನಿವಾಸಿಯಾಗಿದ್ದು, ಕೂಲಿ ಮತ್ತು ಅಡುಗೆ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ. ಇವರು ಕೆಲವು ವರ್ಷದಿಂದ ಮೂರ್ಛೆರೋಗದಿಂದ ನರಳುತ್ತಿದ್ದು,ಇತ್ತೀಚೆಗೆ ಮದ್ಯಪಾನದ ಚಟ ಹೊಂದಿದ್ದು, ವಿಪರೀತ ಕುಡಿತದಿಂದ ಕುಸಿದು ಬಿದ್ದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಈ ಕುರಿತು ನಗರ ಪೆÇಲೀಸ್‍ಠಾಣೆಯಲ್ಲಿ ಪ್ರಕರಣದಾಖಲಾಗಿದೆ.