• first
    second
    third
    previous arrow
    next arrow
  • ಇಂಜಿನೀಯರ್ ಪದವೀಧರ ಗಜಾನನ ನೇಣಿಗೆ ಶರಣು

    300x250 AD


    ಅಂಕೋಲಾ: ಇಲ್ಲಿನ ಲಕ್ಷ್ಮೇಶ್ವರದ ಇಂಜಿನೀಯರ್ ಪದವೀಧರನೊಬ್ಬ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.


    ಗಜಾನನ ನಾರಾಯಣ ನಾಯಕ(25) ಆತ್ಮಹತ್ಯೆ ಮಾಡಿಕೊಂಡವನು. ಈತ ಇಂಜಿನೀಯರಿಂಗ್ ಮುಗಿಸಿ ಮೂರು ತಿಂಗಳ ಹಿಂದೆ ಮನೆಗೆ ಬಂದು, ಸರಕಾರಿ ನೌಕರಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ತಯಾರಿ ಮಾಡುತ್ತಿದ್ದ. ಇಪ್ಪತ್ತು ದಿನಗಳ ಹಿಂದೆ ಸಹೋದರಿಯ ಮದುವೆಯಲ್ಲಿ ಓಡಾಡಿಕೊಂಡಿದ್ದ. ಸೋಮವಾರ ಬೆಳಿಗ್ಗೆ ತಂದೆ-ತಾಯಿ ಮತ್ತುಕಿರಿಯ ಸಹೋದರಿ, ಸಂಬಂಧಿಗಳ ಮದುವೆ ಕಾರ್ಯಕ್ಕೆ ಹೊರಗೆ ಹೋದ ಸಮಯದಲ್ಲಿ ನೇಣು ಹಾಕಿಕೊಂಡಿದ್ದಾನೆ ಎನ್ನಲಾಗಿದೆ.

    300x250 AD


    ಮೃತ ಗಜಾನನ ನಿವೃತ್ತ ಆರ್.ಎಫ್.ಓ ನಾರಾಯಣ ನಾಯಕ ಮತ್ತು ತಾಯಿ ನಿವೃತ್ತ ಶಿಕ್ಷಕಿ ವಿದ್ಯಾವತಿಯವರ ಏಕೈಕ ಪುತ್ರನಾಗಿದ್ದಾನೆ.

    Share This
    300x250 AD
    300x250 AD
    300x250 AD
    Back to top