• Slide
  Slide
  Slide
  previous arrow
  next arrow
 • ಚುನಾವಣೆ ಪಾರದರ್ಶಕವಾಗಿರಲಿ, ನೀತಿ-ನಿಯಮ ಪಾಲಿಸಿ; ಅಪರಜಿಲ್ಲಾಧಿಕಾರಿ ಸೂಚನೆ

  300x250 AD

  ಕಾರವಾರ: ಚುನಾವಣೆ ಸಮಯದಲ್ಲಿ ಮಾಧ್ಯಗಳ ಪಾತ್ರ ಮುಖ್ಯ. ಚುನಾವಣಾ ಆಯೋಗವಾಗಲಿ ಅಥವಾ ಚುನಾವಣಾಧಿಕಾರಿಯಾಗಲಿ ಮಾಧ್ಯಮವನ್ನು ನಿಯಂತ್ರಿಸುವದಿಲ್ಲ. ಚುನಾವಣೆ ಪಾರದರ್ಶಕವಾಗಿರಲಿ ಎಂಬ ಉದ್ದೇಶದಿಂದ ನೀತಿ ನಿಯಮಗಳನ್ನು ಪಾಲಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಹೆಚ್.ಕೆ ಹೇಳಿದರು.

  ಸೋಮವಾರ ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲ ತಹಶೀಲ್ದಾರರು, ಪ್ರಿಂಟಿಂಗ ಪ್ರೆಸ್ ಮಾಲೀಕರು ಮತ್ತು ಕೇಬಲ್ ಆಪರೇಟರ್‍ಗೊಳೊಂದಿಗೆ ಚುನಾವಣಾ ಮಾದರಿ ನೀತಿ ಸಂಹಿತೆಯಂತೆ ಮದ್ರಣ ಹಾಗೂ ಜಾಹೀರಾತುಗಳ ಕುರಿತು ವಿಡಿಯೋ ಸಂವಾದ ನಡೆಸಿ ಮಾತನಾಡಿ, ಕಳೆದ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳಲ್ಲಿ ಇರುವ ನಿಯಮಗಳು ಹಾಗೂ ವ್ಯವಸ್ಥೆ ಪ್ರಸ್ತುತ ವಿಧಾನ ಪರಿಷತ್ ಸ್ಥಳೀಯ ಸಂಸ್ಥೆಗಳ ಕ್ಷೇತ್ರದದ್ವೈವಾರ್ಷಿಕ ಚುನಾವಣೆಯಲ್ಲಿ ಇರುತ್ತದೆ ಎಂದರು.

  ರಾಜಕೀಯ ಪಕ್ಷಗಳ ಪ್ರಚಾರಕ್ಕೆ ಮುಕ್ತ ಅವಕಾಶವಿದೆ. ಮಾದರಿ ನೀತಿ ಸಂಹಿತೆ ವ್ಯಾಪ್ತಿಯೊಳಗೇ ಎಲ್ಲವೂ ಪ್ರಚಾರವಾಗಬೇಕು. ಪ್ರಚಾರ ಮಾಡುವಾಗ ಧಾರ್ಮಿಕ ಭಾವನೆಗಳಿಗೆ ದಕ್ಕೆ ಆಗದಂತೆ ನೋಡಿಕೊಳ್ಳಬೇಕು ಎಂದರು.

  300x250 AD

  ಅಲ್ಲದೇ ಚುನಾವಣೆ ಪ್ರಚಾರದ ಕರಪತ್ರವನ್ನು ಚುನಾವಣಾಧಿಕಾರಿಯ ಗಮನಕ್ಕೆ ತಂದ ನಂತರ ಅದನ್ನು ಮುದ್ರಕರು ಹಾಗೂ ಪ್ರಕಾಶಕರು ಮುದ್ರಿಬೇಕೆಂದು ತಿಳಿಸಿದರು. ಯಾವ ರಾಜಕೀಯ ಪಕ್ಷದ ಎಷ್ಟು ಸಂಖ್ಯೆಯಕರ ಪತ್ರಗಳು ಮುದ್ರಿತವಾಗಿವೆ ಮತ್ತು ಅದರರಲ್ಲಿರುವ ವಿಷಯ, ದಿನಾಂಕ, ಭಾಷೆ ಇತ್ಯಾದಿ ಕುರಿತು ಮಾಹಿತಿ ನೀಡಬೇಕು. ಅಲ್ಲದೇ ಈ ಸಂಬಂಧದ ವೆಚ್ಚವನ್ನು ಸಂಬಂಧಿಸಿದ ಖರ್ಚು ವೆಚ್ಚದ ಸಮಿತಿಗೆ ನೀಡಬೇಕು ಎಂದರು.

  ಕೇಬಲ್ ಆಪರೇಟರ್‍ಗಳು ಕೂಡ ಮಾದರಿ ನೀತಿ ಸಂಹಿತೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಯಾವುದೇ ರಾಜಕೀಯ ಪಕ್ಷಗಳ ಪ್ರಚಾರದ ಜಾಹೀರಾತು ಪ್ರಸಾರಕ್ಕೆ 3 ದಿನ ಮುನ್ನ ಅನುಮತಿಗೆ ನಮೂನೆಯಲ್ಲಿ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಬೇಕು. 24 ಗಂಟೆಯೊಳಗೆ ಸಂಬಂಧಿಸಿದ ಸಮಿತಿ ಅನುಮತಿ ಪತ್ರ ನೀಡಲಿದೆ. ಅಲ್ಲದೇ, ಯಾವುದೇ ಪಕ್ಷಅಥವಾ ಅಭ್ಯರ್ಥಿಯನ್ನು ಓಲೈಸಿ ಪ್ರಸಾರ ಮಾಡುವುದನ್ನು ಪಾವತಿಸುದ್ದಿ ಎಂದು ಪರಿಗಣಿಸಿ ನಿಯಮಾಸಾರ ಕ್ರಮಕ್ಕೆ ಅವಕಾಶವಿದ್ದು, ಯಾವುದೇ ಅಂತಹ ಸಂದರ್ಭವನ್ನು ತಂದುಕೊಳ್ಳಬಾರದು ಎಂದು ಅವರು ಮನವರಿಕೆ ಮಾಡಿಕೊಟ್ಟರು.

  ವಿಡಿಯೋ ಸಂವಾದದಲ್ಲಿ ಆಯಾತಾಲೂಕಿನ ತಹಸೀಲ್ದಾರು, ಮುದ್ರಕರು, ಕೇಬಲ್ ಆಪರೇಟರ್‍ಗಳು ಉಪಸ್ಥಿತರಿದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top