ಕಾರವಾರ: ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜಯಗಳಿಸಿದ ಬಿ. ಎನ್. ವಾಸರೆ ಅವರನ್ನು ಶಾಸಕಿ ರೂಪಾಲಿ ಎಸ್. ನಾಯ್ಕ ಅಭಿನಂದಿಸಿದ್ದಾರೆ.
ನಮ್ಮ ನಾಡು, ನುಡಿಯ ಬಗ್ಗೆ ಜಾಗೃತಿಯ ಜೊತೆಗೆ ಸಾಹಿತ್ಯಿಕವಾಗಿ ನಿರಂತರ ಚಟುವಟಿಕೆ ನಡೆಯಬೇಕಿದೆ. ನೂತನ ಅಧ್ಯಕ್ಷರ ಅವಧಿಯಲ್ಲಿ ಇದೆಲ್ಲವೂ ಸಾಕಾರವಾಗಲಿದೆ ಎನ್ನುವ ನಿರೀಕ್ಷೆ ಎಲ್ಲರದ್ದೂ ಆಗಿದೆ. ಕನ್ನಡ ತೇರು ಎಳೆಯುವ ಕಾಯಕಕ್ಕೆ ತಮ್ಮ ಸಂಪೂರ್ಣ ಸಹಕಾರ ಇದೆ ಎಂದು ರೂಪಾಲಿ ಎಸ್. ನಾಯ್ಕ ತಿಳಿಸಿದ್ದಾರೆ.