ಶಿರಸಿ: ಬೆಂಗಳೂರಿನಲ್ಲಿ ನ.25 ರಿಂದ ನಡೆಯಲಿರುವ 37ನೇ ರಾಜ್ಯ ಮಟ್ಟದ ರೋರಲ್ ಸ್ಫೀಡ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಶಿರಸಿಯ ಅದ್ವೈತ ಸ್ಕೇಟರ್ಸ & ಸ್ಪೋಟ್ರ್ಸ್ ಕ್ಲಬಿನ 9 ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.
ಶ್ರೀವತ್ಸ ನೇತ್ರೆಕರ್, ನವೀನ ಮಡಿವಾಳರ್, ತರುಣ ಕೋಡಕೊಣಿ, ಅದ್ವೈತ ಪ್ರಹ್ಲಾದರಾವ್, ಯಶ್ ಕುಪ್ಸದ್, ಚೈತನ್ಯ ಮರಾಠಿ, ಆರುಷಿ, ಶಂಕರ ಗೌಡಾ ಹಾಗೂ ಅದ್ವೈತ ಕಿರಣಕುಮಾರ ಕುಡಾಳಕರ್ ಇವರ ಉತ್ತರ ಕನ್ನಡ ಜಿಲ್ಲೆಯಿಂದ ರಾಜ್ಯಮಟ್ಟವನ್ನು ಪ್ರತಿನಿಧಿಸುತ್ತಿದ್ದಾರೆಂದು ಸ್ಕೇಟರ್ಸ ಕ್ಲಬಿನ ಅಧ್ಯಕ್ಷ ಕಿರಣಕುಮಾರ್ ಪತ್ರಿಕಾ ಪ್ರಕಟಣೆಯನ್ನು ನೀಡಿರುತ್ತಾರೆ.