ಹೊನ್ನಾವರ: ಕನಕದಾಸ ಜಯಂತಿಯನ್ನು ಇಲ್ಲಿನ ನ್ಯೂ ಇಂಗ್ಲೀಷ್ ಸ್ಕೂಲ್‍ನಲ್ಲಿ ಭಕ್ತಿಪೂರ್ವಕವಾಗಿ, ವಿದ್ಯಾರ್ಥಿಗಳ ಉಪಸ್ಥಿತಿಯಲ್ಲಿ ಆಚರಿಸಲಾಯಿತು.
ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶಾಲಾ ಮುಖ್ಯಾಧ್ಯಾಪಕ ಜಯಂತ ನಾಯಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶಾಲಾ ಶಿಕ್ಷಕ ಎ.ಕೆ.ಭಟ್ ಕನಕದಾಸರ ಕುರಿತಾಗಿ ಮಾತನಾಡಿ, ಕನಕದಾಸರ ಜೀವನ, ಅವರ ವಚನಗಳ ಪ್ರಸ್ತುತತೆಯನ್ನು ವಿವರಿಸಿದರು.
ಶಾಲಾ ವಿದ್ಯಾರ್ಥಿನಿ ನಿರ್ಮಲಾ ಹೆಗಡೆ ಕನಕದಾಸರ ವಚನವನ್ನು ಸುಶ್ರಾವ್ಯವಾಗಿ ಹಾಡಿ ಎಲ್ಲರ ಗಮನ ಸೆಳೆದಳು. ಶಾಲಾ ಶಿಕ್ಷಕರುಗಳು, ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದು, ಮನುಕುಲಕ್ಕೆ ಬೆಳಕು ನೀಡಿದ ಕನಕದಾಸರಿಗೆ ಭಕ್ತಿನಮನ ಸಲ್ಲಿಸಿದರು.