ಭಟ್ಕಳ: ಮುರುಡೇಶ್ವರಕ್ಕೆ ಪ್ರವಾಸಕ್ಕೆಂದು ಬಂದ ಇಬ್ಬರು ಯುವಕರು ಮೋಜು-ಮಸ್ತಿಯೆಂದು ಸಮುದ್ರಕ್ಕೆ ಇಳಿದಿದ್ದ ವೇಳೆ ಓರ್ವ ನೀರಲ್ಲಿ ಮುಳುಗಿ ಇನ್ನೋರ್ವ ಮೃತಪಟ್ಟ ಘಟನೆ ಇಲ್ಲಿನ ತೂದಳ್ಳಿಯಲ್ಲಿ ನಡೆದಿದೆ.
ಮೃತಪಟ್ಟವನನ್ನು ರಘುನಂದನ (17) ಕನಕಪುರ ಎಂದು ಗುರುತಿಸಲಾಗಿದೆ. ಲೈಫ್ ಗಾರ್ಡ್‍ರಿಂದ ರಕ್ಷಿಸಲ್ಪಟ್ಟ ಯುವಕನ್ನು ಬಸವರಾಜು(21) ಎಂದು ಗುರುತಿಸಲಾಗಿದೆ. ಕನಕಪುರದಿಂದ 10 ಜನ ಯುವಕರು ಟೆಂಪೋ ಟ್ರಾಕ್ಸ್ ಮಾಡಿಕೊಂಡು ಮುರುಡೇಶ್ವರಕ್ಕೆ ಪ್ರವಾಸಕ್ಕೆಂದು ಬಂದು ಮುರುಡೇಶ್ವರ ದೇವಸ್ಥಾನದಿಂದಮ1 ಕಿ.ಮೀ ದೂರದಲ್ಲಿರುವ ತೂದಳ್ಳಿಯ ಸಮುದ್ರದಲ್ಲಿ ಈಜುತ್ತಿದ್ದಾಗ ಆಕಸ್ಮಿಕವಾಗಿ ತೆರೆಯ ಹೊಡೆತಕ್ಕೆ ಈರ್ವರು ನೀರಿನಲ್ಲಿ ಮುಳುಗಿದ್ದಾರೆ.
ಮುರುಡೇಶ್ವರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪಿ.ಎಸ್.ಐ ರವೀಂದ್ರ ಬೀರಾದಾರ ತನಿಖೆ ಕೈಗೊಂಡಿದ್ದಾರೆ.