ಕಾರವಾರ: ಉತ್ತರಕನ್ನಡ ಜಿಲ್ಲಾ ಕ್ರೀಡಾ ಪ್ರತಿಷ್ಠಾನದ 2022 ರಿಂದ 2026ನೇ ಅವಧಿಯ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ಪುನರ್ ರಚಿಸಲಾಗಿದ್ದು. ಅಧ್ಯಕ್ಷರಾಗಿ ಹಿರಿಯ ಕ್ರೀಡಾಪಟು ಸದಾನಂದ ನಾಯ್ಕ ಹಾಗೂ ಉಪಾಧ್ಯಕ್ಷರಾಗಿ ನಿವೃತ ದೈಹಿಕ ನಿರ್ದೇಶಕ ಎಸ್.ಜಿ.ಭಟ್ಟ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿಗೆ ಕಾರ್ಯದರ್ಶಿಯಾಗಿ ಮಹಾಂತೇಶ ಜಿ. ಓಶಿಮಠ, ಕೋಶಾಧಿಕಾರಿಯಾಗಿ ಸಂಜೀವಕುಮಾರ ನಾಯ್ಕ, ಸಹ ಕೋಶಾಧಿಕಾರಿಯಾಗಿ ಉದಯ ಜಾಧವ, ಸಹ ಕಾಯರ್ದರ್ಶಿಗಳಾಗಿ ಅನಿಲ ಲೋಕರೆ, ರಮೇಶ ನಾಯಕ, ಸುಧೀರ ಹುಲೇಕಲ್, ರವಿಮಲ್ಲೇಶ ಹಾಗೂ ಸದಸ್ಯರಾಗಿ ಗಣಪತಿನಾಯಕ, ನಿತಿನ್ ದೇಶಪಾಂಡೆ, ಅನಿಲ ಲಾಡ್, ಭುಜಬಲ್‍ಉಪಾಧ್ಯೆ, ಮಾಧವ ನಾಯ್ಕ, ಪರೇಶ ನಾಯ್ಕ್, ಟಿ. ರಂಗಸ್ವಾಮಿ, ರೂಪಸಿಂಗ್ ರಜಪೂತ, ಡಾ. ಪ್ರಸಾದ ಭಂಡಗೆ ಇವರು ಸೇವೆ ಸಲ್ಲಿಸಲಿದ್ದಾರೆ.