• Slide
    Slide
    Slide
    previous arrow
    next arrow
  • ಮುರ್ಡೇಶ್ವರದ ಶಿವನ ವಿಗ್ರಹ ‘ಐಸಿಸ್ ಮ್ಯಾಗ್ಝೀನ್’ನಲ್ಲಿ; ವಿಗ್ರಹದ ಶಿರಭಾಗ ಕತ್ತರಿಸಿ ಐಸಿಸ್ ಧ್ವಜದ ಚಿತ್ರ ಹಾಕಿರುವ ಮತಾಂಧರು !

    300x250 AD

    ಭಟ್ಕಳ: ದೇಶದ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಮುರ್ಡೇಶ್ವರದ ಶಿವನ ಬೃಹತ್ ಪ್ರತಿಮೆಯ ಮೇಲೆ ಐಸಿಸ್ ಉಗ್ರರ ಕಣ್ಣು ಬಿದ್ದಿದೆ ಎಂಬ ಭಯಾನಕ ಮಾಹಿತಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.


    ಈ ಕುರಿತು ಟ್ವೀಟ್ ಮತ್ತು ಫೇಸ್ಬುಕ್ ಪೋಸ್ಟ್ ಹಾಕಿರುವ ಅನ್ಷುಲ್ ಸಕ್ಸೇನಾ ಎಂಬ ಯುವಕ, ಐಸಿಸ್ ಮ್ಯಾಗ್ಜೀನ್ ಆಗಿರುವ ‘the VOICE OF HIND’ನಲ್ಲಿ ಮುರ್ಡೇಶ್ವರದ ಶಿವನ ಪ್ರತಿಮೆಯ ಪೋಟೋ ಹಾಕಿದ್ದು, ಅದರ ಮೇಲೆ ‘Its time to Break False Gods’ ಎಂ ಬರಹವನ್ನು ಹಾಕಲಾಗಿದೆ. ಜೊತೆಗೆ ಶಿವನ ಪ್ರತಿಮೆಯನ್ನು ಅರ್ಧಕ್ಕೆ ಕತ್ತರಿಸಿ, ಅದರ ತುತ್ತ ತುದಿಗೆ ಐಸಿಸ್ ರೀತಿಯ ಧ್ವಜ ಹಾರಾಡುವಂತೆ ಚಿತ್ರಿಸಲಾಗಿದೆ. ಈ ಕುರಿತು ಕರ್ನಾಟಕ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ಈ ಕೂಡಲೇ ಸುರಕ್ಷಾ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

    300x250 AD


    ಈ ಪೋಟೋ ಮತ್ತು ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದರ ಸತ್ಯಾಸತ್ಯತೆ ಸಂಬಂಧಿಸಿದ ಇಲಾಖೆ ಕ್ರಮವಹಿಸಬೇಕು ಮತ್ತು ಇಂತಹ ದುಷ್ಕೃತ್ಯಕ್ಕೆ ಸರಕಾರ ಅವಕಾಶ ನೀಡಬಾರದು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. https://m.facebook.com/story.php?story_fbid=451998139630031&id=100044595456504

    Share This
    300x250 AD
    300x250 AD
    300x250 AD
    Leaderboard Ad
    Back to top