ಶಿರಸಿ: ಅಡಿಕೆ ಕಾಳುಮೆಣಸು ಮತ್ತು ಏಲಕ್ಕಿ ವರ್ತಕರ ಸಂಘದ 21 ನೇ ವಾರ್ಷಿಕ ಸರ್ವ ಸಾಧಾರಣ ಸಭೆ ನಡೆಯಿತು. ಈ ಸಂದರ್ಭದಲ್ಲಿ ಪ್ರಸ್ತುತ ವರ್ಷ ಶಿರಸಿ ತಾಲೂಕಿನ ಕೆಲವೊಂದು ಶಾಲೆಗಳನ್ನು ಆಯ್ಕೆಮಾಡಿ ಶುದ್ಧಕುಡಿಯುವ ನೀರಿನ ಯಂತ್ರೋಪಕರಣವನ್ನು ಸಾಂಕೇತಿಕವಾಗಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಸತೀಶ ಭಟ್ಟ ನಾಡಗುಳಿ, ಉಪಾಧ್ಯಕ್ಷ ವಿವೇಕ ಕಾಮತ, ಪ್ರಧಾನ ಕಾರ್ಯದರ್ಶಿ ಕೆ.ಬಿ. ಲೋಕೇಶ, ಕಾರ್ಯದರ್ಶಿ ಸದಾನಂದ ಹೆಗಡೆ ಹರೀಶಿ ಹಾಗೂ ಖಜಾಂಜಿ ರಿಝ್ವಾರ್ ಬೆಸಾನಿಯಾ ಉಪಸ್ಥಿತರಿದ್ದರು.